ಮುಖ್ಯಮಂತ್ರಿ ಕಚೇರಿಯಿಂದ ಕೆಲವು ಪತ್ರಕರ್ತರಿಗೆ ಲಂಚ ರೂಪದ ದುಬಾರಿ ಬೆಲೆಯ ಗಿಫ್ಟ್?

Prasthutha|

ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ರಾಜ್ಯದ ಕೆಲವು ಪತ್ರಕರ್ತರಿಗೆ ಮುಖ್ಯಮಂತ್ರಿ ಕಚೇರಿಯಿಂದ ಸಿಹಿತಿಂಡಿಗಳ ಜೊತೆಗೆ ಲಂಚದ ರೂಪದಲ್ಲಿ ಸುಮಾರು 2.5 ಲಕ್ಷ ರೂಪಾಯಿಯ ದುಬಾರಿ ಗಿಫ್ಟ್ ನೀಡಲಾಗಿದೆ ಎಂಬ ಆಘಾತಕಾರಿ ಅಂಶಗಳು ಬಹಿರಂಗವಾಗಿವೆ.

- Advertisement -

ದೀಪಾವಳಿ ಹಬ್ಬದ ವೇಳೆ, ರಾಜ್ಯದ ಹೆಚ್ಚಿನ ಪತ್ರಕರ್ತರಿಗೆ ಮುಖ್ಯಮಂತ್ರಿಗಳ ಕಚೇರಿಯಿಂದ ಸಿಹಿತಿಂಡಿ ಮತ್ತು 2.5 ಲಕ್ಷ ರೂಪಾಯಿಯನ್ನು ಗಿಫ್ಟ್ ಆಗಿ ನೀಡಿದ್ದಾರೆ. ಮುಂದಿನ ಚುನಾವಣೆಯವರೆಗೂ ಮಾಧ್ಯಮಗಳಿಂದ ಸರ್ಕಾರಿ ವಿರೋಧಿ ಸುದ್ದಿಗಳ ಪ್ರಕಟನೆಯನ್ನು ನಿರೀಕ್ಷೆ ಮಾಡಬೇಡಿ ಎಂಬ ವೈರಲ್ ಮೆಸೇಜನ್ನು ಭೇದಿಸಿದಾಗ ಸರ್ಕಾರದ ಭ್ರಷ್ಟಾಚಾರ ಬೆಳಕಿಗೆ ಬಂದಿದೆ.

ಈ ಮಧ್ಯೆ ಕೆಲವು ಪತ್ರಕರ್ತರು ಸ್ವೀಟ್ಸ್ ಜೊತೆ ಹಣದ ಕಟ್ಟನ್ನು ಕಂಡ ತಕ್ಷಣ ಮುಖ್ಯಮಂತ್ರಿ ಕಚೇರಿಗೆ ಇದನ್ನು ಹಿಂದಕ್ಕೆ ಕಳುಹಿಸಿದ್ದಾರೆ ಮತ್ತು ಸರ್ಕಾರದ ಭ್ರಷ್ಟಾಚಾರವನ್ನು ಒಕ್ಕೊರಳಿನಿಂದ ಟೀಕಿಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

ಕೆಲವು ಸುದ್ದಿವಾಹಿನಿಯ ನಿರೂಪಕರಿಗೆ ಮತ್ತು ರಾಜಕೀಯ ವಿಶ್ಲೇಷಕರಿಗೆ 5 ಲಕ್ಷ ರೂ. ವರೆಗೆ ಹಣ ನೀಡಿರುವುದನ್ನು ಮೂಲಗಳು ಖಚಿತಪಡಿಸಿವೆ.
ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಮಾಧ್ಯಮ ಕಾರ್ಯದರ್ಶಿ ಮೋಹನ್ ಕೃಷ್ಣ, ನಾನು ಯಾರಿಗೂ ಹಣ ನೀಡಿಲ್ಲ. ಅನಾರೋಗ್ಯದಿಂದ ನಾನು ಕಚೇರಿಗೆ ತೆರಳಿಲ್ಲ. ಇದರ ಬಗ್ಗೆ ನನಗೇನೂ ತಿಳಿದಿಲ್ಲ ಎಂದು ತಿಳಿಸಿದರು.



Join Whatsapp