ಕೆಲಸದ ಮಹಿಳೆ, ಆಕೆಯ ಮಗನಿಗೆ ಚಿತ್ರಹಿಂಸೆ ನೀಡಿದ ಉಚ್ಛಾಟಿತ ಬಿಜೆಪಿ ನಾಯಕಿಯ ಬಂಧನ

Prasthutha|

ರಾಂಚಿ: ಕೆಲಸದ ಮಹಿಳೆಗೆ ಚಿತ್ರಹಿಂಸೆ ನೀಡಿ, ಕಬ್ಬಿಣದ ಕೋಲಿನಿಂದ ಹೊಡೆದು ಹಲ್ಲು ಉದುರಿಸಿದ ಹಾಗೂ ಕೂಡಿ ಹಾಕಿ ಅನ್ನ ನೀಡದೆ ಹಿಂಸೆ ನೀಡಿದ ಜಾರ್ಖಂಡ್ ಉಚ್ಛಾಟಿತ ಬಿಜೆಪಿ ನಾಯಕಿಯನ್ನು ಪೊಲೀಸರು ಇಂದು ಬೆಳಿಗ್ಗೆ ಬಂಧಿಸಿದ್ದಾರೆ.

- Advertisement -

ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಮಂಡಳಿಯ ಸದಸ್ಯೆ ಸೀಮಾ ಪಾತ್ರಾ ಬಂಧಿತೆ. ಇವರ ಪತಿ ಮಹೇಶ್ವರ ಪಾತ್ರ ನಿವೃತ್ತ ಐಎಎಸ್ ಅಧಿಕಾರಿ.

ಮಗನಿಗೆ ಚಿತ್ರಹಿಂಸೆ ನೀಡಿ ಆಸ್ಪತ್ರೆಗೆ ಸೇರಿಸಿದ್ದರು. ಇದನ್ನು ಪ್ರಶ್ನಿಸಿ ಜಗಳವಾಡಿದ ಮನೆ ಸಹಾಯಕಿಯ ಮೇಲೂ ತೀವ್ರ ಹಲ್ಲೆ ನಡೆಸಲಾಗಿದೆ. ಆದರೆ ಬಂಧಿತ ಸೀಮಾ ಪಾತ್ರಾ ನಾನು ಮುಗ್ಧೆ, ನನ್ನ ಮೇಲೆ ಪ್ರಕರಣ ಹೇರಲಾಗಿದೆ ಎಂದು ಹೇಳಿದರು.

- Advertisement -

ಅಡುಗೆಯಾಳು ಮಗನಿಗೆ ಹಿಂಸೆ ನೀಡಿದ್ದರ ಸಂಬಂಧ ಆಕೆ ಗಲಾಟೆ ಮಾಡಿದ ಮತ್ತು ಸೀಮಾ ದಾಳಿ ಮಾಡಿದ ವೀಡಿಯೋ ವೈರಲ್ ಆಗುತ್ತಲೇ ಮಂಗಳವಾರ ಬಿಜೆಪಿಯು ಆಕೆಯನ್ನು ಅಮಾನತು ಮಾಡಿದೆ. ನನಗೆ ಆಹಾರವನ್ನೂ ನೀಡದೆ, ನೀರನ್ನೂ ನೀಡದೆ ಉಪವಾಸ ಕೆಡಹಿದ್ದಾಳೆ ಎಂದೂ ಮನೆ ಸಹಾಯಕಿ ಆರೋಪ ಮಾಡಿದ್ದಾರೆ.

ಈಗ ತಾಯಿ, ಮಗ ಇಬ್ಬರೂ ಆಸ್ಪತ್ರೆಯಲ್ಲಿ ಇದ್ದಾರೆ.  ಆಕೆಯ ಮಗ ಮಾನಸಿಕ ಅಸ್ವಸ್ಥ. ಅದಕ್ಕೆ ಆಸ್ಪತ್ರೆಗೆ ಸೇರಿಸಿದ್ದೆ ಎಂದೂ ಸೀಮಾ ಹೇಳುತ್ತಿದ್ದಾರೆ.

ಮಾಲಕಿ ಮನೆಯಿಂದ ಮನೆ ಸಹಾಯಕಿಯನ್ನು ಬಿಡಿಸಿದ ಪೊಲೀಸರು ರಾಜೇಂದ್ರ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ ಗೆ ಚಿಕಿತ್ಸೆಗೆ ಸೇರಿಸಿದ್ದಾರೆ. ಸುನೀತಾಳ ವೀಡಿಯೋ ಈಗ ಎಲ್ಲ ಕಡೆ ವೇಗವಾಗಿ ಹರಿದಾಡುತ್ತಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ಪ್ರತಿಭಟನೆಯ ಸ್ವರಗಳು ಮೊಳಗುತ್ತಿವೆ.

ಜಾರ್ಖಂಡ್ ರಾಜ್ಯಪಾಲ ರಮೇಶ್ ಬಯಿಸ್ ಅವರು ಪೊಲೀಸ್ ಮಹಾ ನಿರ್ದೇಶಕ ನೀರಜ್ ಸಿನ್ಹಾರನ್ನು ಭೇಟಿ ಮಾಡಿ ಅಮಾನತುಗೊಂಡ ಬಿಜೆಪಿ ನಾಯಕಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.

ಕಳೆದ ಹತ್ತು ವರುಷಗಳಿಂದ ಸುನಿತಾ ಆ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಇದರಲ್ಲಿ ಸೀಮಾರ ಗಂಡನ ಪಾತ್ರ ಏನೂ ಕಂಡು ಬಂದಿಲ್ಲ ಎನ್ನಲಾಗಿದೆ.

ಮುಂದಿನ ವೀಡಿಯೋದಲ್ಲಿ ಆಸ್ಪತ್ರೆಯ ಬೆಡ್ ಮೇಲೆ ಮುಖ ಮತ್ತು ದೇಹದ ಗಾಯಗಳೊಡನೆ ಸುನಿತಾ ಅಳುತ್ತಿರುವುದು ಕಂಡು ಬಂದಿದೆ. “ನನ್ನನ್ನು ಬಂಧಿಸಿಡಲಾಗಿತ್ತು, ಚಿತ್ರಹಿಂಸೆ ನೀಡಲಾಗಿದೆ, ಕಬ್ಬಿಣದ ಸಲಾಕೆಯಿಂದ ಹೊಡೆದಿದ್ದಾರೆ, ಉಪವಾಸ ಕೆಡವಿದ್ದಾರೆ” ಎಂದು ಸುನಿತಾ ಅಳುತ್ತ ಹೇಳಿದ್ದಾರೆ.

29ರ ಪ್ರಾಯದ ಅವರ ಮೂರು ಹಲ್ಲುಗಳು ಉದುರಿರುವುದು ಸಹ ಸ್ಪಷ್ಟಗೊಂಡಿದೆ. ಆಕೆಗೆ ಸರಿಯಾಗಿ ಕುಳಿತುಕೊಳ್ಳಲೂ ಆಗುತ್ತಿಲ್ಲ. ಸೀಮಾ, ನೆಲಕ್ಕೆ ಉಚ್ಚೆ ಹೊಯ್ದು ನನ್ನನ್ನು ಒತ್ತಿ ನೆಕ್ಕಿಸಿದ್ದಾರೆ ಎಂದು ಕೂಡ ಸುನಿತಾ ಆಪಾದಿಸಿದ್ದಾರೆ.



Join Whatsapp