ನಕಲಿ ಇಂಜಿನಿಯರಿಂಗ್, ಟೆಕ್ನಿಕಲ್ ಸರ್ಟಿಫಿಕೇಟ್ ಹೊಂದಿದ 2799 ಮಂದಿಯ ವಿರುದ್ಧ ಕ್ರಮ: ಸೌದಿ ಕೌನ್ಸಿಲ್ ಆಫ್ ಇಂಜಿನಿಯರ್ಸ್

Prasthutha|

ರಿಯಾದ್: ನಕಲಿ ಇಂಜಿನಿಯರಿಂಗ್ ಮತ್ತು ಟೆಕ್ನಿಕಲ್ ಸರ್ಟಿಫಿಕೇಟ್ ಗಳನ್ನು ಹೊಂದಿದ ವಿವಿಧ ದೇಶಗಳ ಸುಮಾರು 2799 ಅನಿವಾಸಿ ಇಂಜಿನಿಯರ್ ಗಳು ಕಾನೂನು ಕ್ರಮವನ್ನು ಎದುರಿಸಲಿದ್ದಾರೆ ಎಂದು ಸೌದಿ ಇಂಜಿನಿಯರ್ ಗಳ ಕೌನ್ಸಿಲ್ ನ ಪ್ರಧಾನ ಕಾರ್ಯದರ್ಶಿ ಇಂಜಿನಿಯರ್ ಫರ್ಹಾನ್ ಅಲ್ ಶಮ್ಮಾರಿ ಹೇಳಿದ್ದಾರೆ. ಅವರ ವಿರುದ್ಧ ದಂಡನಾತ್ಮಕ ಕ್ರಮ ಕೈಗೊಳ್ಳುವುದಕ್ಕಾಗಿ ಅವರನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

- Advertisement -

ಒಕಝ್/ಸೌದಿ ಗಝೆಟ್ ಜೊತೆ ಮಾತನಾಡಿದ ಅವರು ಇಂಜಿನಿಯರಿಂಗ್ ಮತ್ತು ಟೆಕ್ನಿಕಲ್ ವೃತ್ತಿಗಳಿಗೆ ನುಸುಳಿಕೊಂಡಿರುವ ಉಲ್ಲಂಘಿತರು ಮತ್ತು ಅನರ್ಹರನ್ನು ಹಿಡಿಯುವುದಕ್ಕಾಗಿ ಕೌನ್ಸಿಲ್ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದೆ ಎಂದರು.

“ಉನ್ನತ ಮಟ್ಟದಲ್ಲಿ ವಿಶ್ವಾಸಾರ್ಹತೆ ಮತ್ತು ಗುಣಮಟ್ಟಗಳ ಅಗತ್ಯವಿರುವ ಟೆಕ್ನಿಕಲ್ ಮತ್ತು ವೃತ್ತಿಪರ ಕೆಲಸಗಳನ್ನು ಅಗತ್ಯ ಅರ್ಹತೆಗಳಿಲ್ಲದೆ ನಡೆಸುತ್ತಿರುವವರನ್ನು ನಿವಾರಿಸುವ ಯೋಜನೆಯ ಭಾಗವಾಗಿ ಇದು ನಡೆದಿದೆ” ಎಂದು ಅವರು ತಿಳಿಸಿದರು.

- Advertisement -

 ತಾವು ಕೆಲಸ ಮಾಡುತ್ತಿರುವ ಯೋಜನೆಗಳ (Projects) ಸುರಕ್ಷತೆಗೆ ದೊಡ್ಡ ಅಪಾಯವನ್ನುಂಟುಮಾಡಬಲ್ಲ ಮತ್ತು ಇಂಜಿನಿಯರಿಂಗ್ ಹಾಗೂ ನಿರ್ಮಾಣ ವಲಯದ ಗುಣಮಟ್ಟ ಮತ್ತು ಫಲಿತಾಂಶದ ಮೇಲೆ ನಕಾರಾತ್ಮಕ ಪರಿಣಾಮವುಂಟುಮಾಡಬಲ್ಲ ಟೆಕ್ನಿಶಿಯನ್ ಗಳು ಮತ್ತು ಸಹಾಯಕ ಇಂಜಿನಿಯರ್ ಗಳನ್ನು ಪತ್ತೆಹಚ್ಚುವ ಪ್ರಾಮುಖ್ಯತೆಯ ಕುರಿತು ಅಲ್ ಶಮ್ಮಾರಿ ಒತ್ತಿ ಹೇಳಿದ್ದಾರೆ.  

ಕಟ್ಟದ ಮತ್ತು ನಿರ್ಮಾಣ ಕ್ಷೇತ್ರದಲ್ಲಿ ಉದ್ಯೋಗಗಳನ್ನು ಪಡೆಯುವುದಕ್ಕಾಗಿ ನಕಲಿ ಸರ್ಟಿಫಿಕೇಟ್ ಗಳನ್ನು ಪ್ರದರ್ಶಿಸುವ ಮೂಲಕ ದೇಶದ ಸಾಮರ್ಥ್ಯ ಮತ್ತು ಆರ್ಥಿಕತೆಯ ಮೇಲೆ ಕೆಟ್ಟಪರಿಣಾಮವನ್ನು ಬೀರುವವರನ್ನು ಕೌನ್ಸಿಲ್ ಬಹಳ ಸಮೀಪದಿಂದ ಗಮನಿಸುತ್ತಿದೆ ಎಂದು ಅವರು ಹೇಳಿದ್ದಾರೆ.

“ನಕಲಿ ಸರ್ಟಿಫಿಕೇಟ್ ಗಳನ್ನು ನೀಡಿದ ಹೆಸರುಗಳನ್ನು ಶಿಕ್ಷಿಸುವುದಕ್ಕಾಗಿ ಮತ್ತು ಟೆಕ್ನಿಕಲ್ ಹಾಗೂ ಇಂಜಿನಿಯರಿಂಗ ಕೆಲಸಗಳನ್ನು ಮಾಡುವುದರಿಂದ ಅವರನ್ನು ತಡೆಯುವುದಕ್ಕಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಕಳಿಸಲಾಗುವುದು” ಎಂದು ಅವರು ತಿಳಿಸಿದರು.

Join Whatsapp