ಪ್ರಧಾನಿ ಪಟ್ಟದಿಂದ ಕೆಳಗಿಳಿದರೂ ಸೀಟಿನ ಮೇಲೆ ವ್ಯಾಮೋಹ; ವೈರಲ್ ಆಯ್ತು ನೆತನ್ಯಾಹು ‘ಆಸನ’ ಪ್ರಹಸನ!
Prasthutha: June 15, 2021

ಇಸ್ರೇಲ್: ಅಧಿಕಾರ ಕಳೆದುಕೊಂಡು ಪ್ರಧಾನ ಮಂತ್ರಿ ಪಟ್ಟದಿಂದ ಕೆಳಗಿಳಿದರೂ ಮಾಜಿ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಪ್ರಧಾನಿ ಅವರಿಗೆ ಮೀಸಲಿರಿಸಿದ ಸೀಟಿನಲ್ಲಿ ಕೂರುವ ಮೂಲಕ ಅಚ್ಚರಿಗೆ ಕಾರಣರಾದರು.
ತಕ್ಷಣವೇ ಅವರ ಆಪ್ತರೊಬ್ಬರು ಅವರ ಬಳಿಗೆ ಬಂದು ಪ್ರಮಾದದ ಬಗ್ಗೆ ತಿಳಿಸಿದ್ದಾರೆ. ತಕ್ಷಣವೇ ಎದ್ದು ಹೋದ ನೆತನ್ಯಾಹು ಬಳಿಕ ತನಗೆ ಮೀಸಲಿರಿಸಿದ್ದ ವಿಪಕ್ಷ ನಾಯಕರ ಆಸನದಲ್ಲಿ ಆಸೀನರಾದರು.
ಸದ್ಯ ಈ ಕುರಿತ ವೀಡಿಯೋ ಟ್ವಿಟ್ಟರ್ ನಲ್ಲಿ Bloomberg Quicktake ಪ್ರಕಟಿಸಿದ್ದು ವೈರಲ್ ಆಗಿದೆ. ನೂತನ ಸರಕಾರದ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿರುವ ನಫ್ತಾಲಿ ಬೆನೆಟ್ ಅವರ ಅಧಿಕಾರ ಸ್ವೀಕರಿಸುವ ಸಮಯದಲ್ಲಿ ಅಲ್ಲಿನ ಸಂಸತ್ ಭವನದಲ್ಲಿ ನಡೆದಿದ್ದಾಗಿ ವರದಿಯಾಗಿದೆ.
ಕಳೆದ ಭಾನುವಾರ ನಡೆದ ವಿಶ್ವಾಸಮತ ಯಾಚನೆ ಮೂಲಕ ಬೆಂಜಮಿನ್ ನೆತನ್ಯಾಹು ಅವರನ್ನ ಪದಚ್ಯುತಗೊಳಿಸುವುದರೊಂದಿಗೆ 12 ವರುಷಗಳ ನೆತನ್ಯಾಹು ಆಡಳಿತ ಅಂತ್ಯ ಕಂಡಿತ್ತು.
