ಬಿಜೆಪಿಗೆ ಗುಡ್ ಬೈ ಹೇಳಿ ಆಪ್ ಕೈ ಹಿಡಿದ ಬಿಜೆಪಿಯ ಮಾಜಿ ಶಾಸಕ ಹೆಚ್.ಡಿ. ಬಸವರಾಜ್

Prasthutha|

►ಬಿಜೆಪಿಯು ಮಾದರಿ ಎನ್ನುವುದನ್ನು ಆಪ್ ನಿಂದ ನೋಡಿ ಕಲಿಯಲಿ

- Advertisement -

ಬೆಂಗಳೂರು: ಆಮ್ ಆದ್ಮಿ ಪಾರ್ಟಿಯ ತಥವ ಸಿದ್ಧಾಂತ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರವರ ಜನಪರ ಆಡಳಿತವನ್ನು ಮೆಚ್ಚಿ, ಬಿಜೆಪಿಯಲ್ಲಿರುವ ಭ್ರಷ್ಟಾಚಾರ, ಅಂತರಿಕ ಕಿತ್ತಾಟದಿಂದ ಬೇಸತ್ತು ವಿರಾಜಪೇಟೆ ಕ್ಷೇತ್ರದ ಮಾಜಿ ಶಾಸಕರಾದ ಹೆಚ್. ಬಸವರಾಜು ಭಾರತೀಯ ಜನತಾ ಪಾರ್ಟಿಗೆ ಗುಡ್ ಬೈ ಹೇಳಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಆಮ್ ಆದ್ಮಿ ಪಕ್ಷ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯ ಸಂದರ್ಭ ಹೆಚ್.ಡಿ. ಬಸವರಾಜು ಆಪ್ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.

- Advertisement -

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ ಹೆಚ್.ಡಿ. ಬಸವರಾಜು, ಅಪ್ ಪಕ್ಷವು ಆರಂಭದ ದಿನದಿಂದಲೂ ಪ್ರಾಮಾಣಿಕತೆಯೊಂದಿಗೆ ರಾಜಿ ಮಾಡಿಕೊಳ್ಳದೆ ಮುಂದುವರಿಯುತ್ತಿದೆ. ಕಳಂಕ ರಹಿತ ಹಾಗೂ ಪಾರದರ್ಶಕ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಸಾಮಾನ್ಯ ಜನರ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿದೆ.

ಮಾಧ್ಯಮವು ದೇಶದ ನೈಜತೆಯನ್ನು ಸಮಾಜಕ್ಕೆ ತೋರ್ಪಡಿಸುತ್ತಿದೆ. ಇದರಿಂದ ಬಿಜೆಪಿಯ ನೈಜ ಮುಖದ ಅರುವು ಜನರಿಗಾಗುತ್ತಿದೆ. ಹಾಗಾಗಿ ಮಾಧ್ಯಮಕ್ಕೆ ಅಭಿನಂದನೆಗಳು.

ಮಾದರಿ ರಾಜ್ಯವೇನು ಎನ್ನುವುದನ್ನು ಬಿಜೆಪಿಯು ಆಪ್ ನ್ನು ನೋಡಿ ಕಲಿಯಲಿ. ದೆಹಲಿಯನ್ನೊಮ್ಮೆ ನೋಡಲಿ ಎಂದು ಬಿಜೆಪಿ ಇದೇ ಸಂದರ್ಭ ಹೆಚ್.ಡಿ. ಬಸವರಾಜು ಸಲಹೆ ನೀಡಿದ್ದಾರೆ. ಆಪ್ ನ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುತ್ತೇನೆ. ಜನರಿಗೆ ಅವರ ಹಕ್ಕಿಗಳು ತಲುಪಿಸುವ ಸಲುವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವುದಕ್ಕಾಗಿ ಯಾವುದೇ ಆಕಾಂಕ್ಷೆಗಳನ್ನು ಇಟ್ಟುಕೊಳ್ಳದೆ ಆಪ್ ಪಕ್ಷಕ್ಮೆ ಸೇರ್ಪಡೆಗೊಂಡಿದ್ದೇನೆ ಎಂದು ಹೇಳಿದ್ದಾರೆ.

Join Whatsapp