ಎಥೆನಾಲ್‌ ಪ್ರೇರಿತ ವಾಹನಗಳ ಬಿಡುಗಡೆಗೆ ದಿನಗಣನೆ: ನಿತಿನ್ ಗಡ್ಕರಿ

Prasthutha|

ಹೊಸದಿಲ್ಲಿ: ಮುಂಬರುವ ಕೆಲವೇ ದಿನಗಳಲ್ಲಿ ಶೇಕಡಾ 100ರಷ್ಟು ಪರ್ಯಾಯ ಇಂಧನವಾದ ಎಥೆನಾಲ್‌ನಿಂದಲೇ ಚಲಿಸುವ ವಾಹನಗಳ ಬಿಡುಗಡೆಯಾಗುತ್ತಿರುವುದಾಗಿ ಕೇಂದ್ರ ಸರಕಾರ ಮಾಹಿತಿ ಹಂಚಿಕೊಂಡಿದೆ.

- Advertisement -

ಸಂಪೂರ್ಣ ಎಥೆನಾಲ್‌ ಚಾಲಿತ ವಾಹನಗಳ ಬಿಡುಗಡೆ ಕುರಿತಾಗಿ ಮಾತನಾಡಿರುವ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಮುಂಬರುವ ಆಗಸ್ಟ್‌ ವೇಳೆಗೆ ಪ್ರಮುಖ ವಾಹನ ಉತ್ಪಾದನಾ ಕಂಪನಿಗಳು ಎಥೆನಾಲ್‌ ಚಾಲಿತ ವಾಹನಗಳನ್ನು ಬಿಡುಗಡೆ ಮಾಡುತ್ತಿರುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

ಮಾಲಿನ್ಯ ಮುಕ್ತ ಮಾಡುವುದರ ಜೊತೆಗೆ ಸಾಂಪ್ರದಾಯಿಕ ಇಂಧನಗಳ ಮೇಲಿನ ಅವಲಂಬನೆ ತಗ್ಗಿಸುವ ನಿಟ್ಟಿನಲ್ಲಿ ಎಥೆನಾಲ್‌ ಚಾಲಿತ ವಾಹನಗಳನ್ನು ಬಿಡುಗಡೆಗೆ ಪ್ರೋತ್ಸಾಹಿಸಲಾಗುತ್ತಿದ್ದು, ಇವು ಸಾಮಾನ್ಯ ವಾಹನಗಳಿಗಿಂತಲೂ ಕಡಿಮೆ ವೆಚ್ಚದಾಯಕ ಮಾದರಿಯಾಗಿರುವುದರ ಜೊತೆಗೆ ಪರಿಸರ ಸ್ನೇಹಿ ವಾಹನಗಳಾಗಿವೆ ಎಂದು ಅವರು ತಿಳಿಸಿದ್ದಾರೆ.