ಮುಸ್ಲಿಮರು ತರಕಾರಿ, ಮೀನು ಮಾರಾಟ ಮಾಡುತ್ತಾ ಬಂದರೆ ಗುಂಡು: ಬೆದರಿಕೆ ಹಾಕಿದ ಬಜರಂಗದಳ ಮುಖಂಡ

Prasthutha|

ಸಕಲೇಶಪುರ: ಮುಸ್ಲಿಮರು ತರಕಾರಿ, ಮೀನು ಮಾರಾಟ ಮಾಡುತ್ತಾ ಹಿಂದೂಗಳ ಮನೆ ಬಳಿ ಬಂದರೆ ಗುಂಡು ಹಾರಿಸುತ್ತೇವೆ ಎಂದು ಬಜರಂಗದಳ ಮುಖಂಡನೋರ್ವ ಬೆದರಿಕೆ ಹಾಕಿದ ಘಟನೆ ನಡೆದಿದೆ.

- Advertisement -

ಸಕಲೇಶಪುರ ಪಟ್ಟಣದಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯೊಂದರಲ್ಲಿ ಮಾತನಾಡಿದ ಬಜರಂಗದಳ ಮುಖಂಡ ರಘು, ”ತರಕಾರಿ, ಮೀನು ಮಾರಾಟ ಮಾಡುತ್ತಾ ಹಿಂದೂಗಳ ಮನೆಯ ಬಳಿ ಬರುವ ಮುಸ್ಲಿಮ್ ವ್ಯಾಪಾರಿಗಳು ಎಚ್ಚರಿಕೆಯಿಂದಿರಿ, ಮಾರಾಟಕ್ಕೆಂದು ಮನೆ ಬಳಿ ಬಂದರೆ ನಮ್ಮಲ್ಲಿರುವ ಕೋವಿಯಿಂದ ಗುಂಡು ಹಾರಿಸಬೇಕಾಗುತ್ತದೆ” ಎಂದು ಬೆದರಿಕೆ ಹಾಕಿದ್ದಾನೆ.