ಕಾಂಗ್ರೆಸ್ ಅವಧಿಯ ಕಾಮಗಾರಿಗಳನ್ನು ನಮ್ಮದೆನ್ನುವ ಬಿಜೆಪಿಯ ನಡೆ ನಾಚಿಕೆಗೇಡು : ಕೆಪಿಸಿಸಿ ಈಶ್ವರ ಖಂಡ್ರೆ ಕಟು ಟೀಕೆ

Prasthutha|

- Advertisement -

ಬಿಜೆಪಿ ಸರ್ಕಾರ ಬಂದ ಮೇಲೆ ಯಾವುದೇ ಕಾಮಗಾರಿ ಘೋಷಣೆಯಾಗಿಲ್ಲ ಮಾತ್ರವಲ್ಲ ಈ ಹಿಂದೆ ಘೋಷಣೆಯಾದಂತಹಾ ಕಾಮಗಾರಿಗಳನ್ನು ತಡೆಹಿಡಿಯಲಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ದುರಾಡಳಿತ ದೇಶದ ಜನರನ್ನು ಅಸ್ತವ್ಯಸ್ಥವಾಗಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಾಗ್ಧಾಳಿ ನಡೆಸಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಅವಧಿಯಲ್ಲಿ 7500 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಿದ್ದಾರೆ . ಅದರಲ್ಲಿ 5000 ಕೋಟಿ ರೂಪಾಯಿಯಷ್ಟು ಕಾಮಗಾರಿಗಳು ನಡೆದಿವೆ. ಕೆಕೆಆರ್‌ಡಿಬಿ ಅಡಿಯಲ್ಲಿ 1136 ಕೋಟಿ ರೂ ಗಳು ಮಾತ್ರ ಬಿಡುಗಡೆಯಾಗಿದೆ . ಈ ಬಾರಿಯ ಕಾಮಗಾರಿಗೆ ನಯಾಪೈಸೆ ಖರ್ಚಾಗಿಲ್ಲ. ಆದರೂ ಈ ಹಿಂದೆ ನಡೆದ ಕಾಮಗಾರಿಯನ್ನು ಬಿಜೆಪಿ ಸರ್ಕಾರ ತಮ್ಮದು ಎಂದು ಬಿಂಬಿಸುತ್ತಿದೆ. ಇದು ಕರ್ನಾಟಕಕ್ಕೆ ಮಾಡುವ ಅನ್ಯಾಯ ಎಂದು ಖಂಡ್ರೆ ಆರೋಪಿಸಿದ್ದಾರೆ.

ಖಾಲಿಯಿದ್ದ ಹುದ್ದೆಗಳನ್ನೂ ಸರ್ಕಾರ ಕೊರೋನಾದ ನೆಪಹೇಳಿ ತುಂಬುತ್ತಿಲ್ಲ. ಸಿಲಿಂಡರ್ ಬೆಲೆ ಸಾವಿರಕ್ಕೆ ತಲುಪಿದೆ. ರೈತರ ಆದಾಯ 2014 ರಲ್ಲಿ ಇದ್ದಷ್ಟೇ ಇದೆ. ಪೆಟ್ರೋಲ್ ಬೆಲೆ 100 ಮತ್ತು ಡೀಸೆಲ್ 80 ರೂಪಾಯಿ ದಾಟಿದೆ. ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ದಿನೇದಿನೇ ಹೆಚ್ಚಾಗಿದೆ. ದೇಶದ ಜನರು ಹೋರಾಟ ಮಾಡಿದರೂ ಕ್ಯಾರೇ ಎನ್ನದ ಸರ್ಕಾರ ಜನರಿಗೆ ದ್ರೋಹ ಮಾಡಿದೆ . ದೇಶದ ಜನರು ಪರದಾಡುತ್ತಿರುವಾಗ ಅಚ್ಚೇದಿನ್ ಯಾರಿಗೆ ಬಂದಿದೆ ಎಂದು ಅವರು ಪ್ರಶ್ನಿಸಿದ್ದಾರೆ.



Join Whatsapp