ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಕಾಶ್ಮೀರ ಸಮಸ್ಯೆಯನ್ನು ಎತ್ತಿ ಹಿಡಿದ ಉರ್ದುಗಾನ್

Prasthutha|

 ವಿಶ್ವಸಂಸ್ಥೆ: ಇಸ್ಲಾಮಿಕ್ ರಾಷ್ಟ್ರಗಳ ನಾಯಕತ್ವಕ್ಕಾಗಿ ಸ್ಪರ್ಧಿಸುತ್ತಿರುವ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಉರ್ದುಗಾನ್ ಇತ್ತೀಚೆಗೆ ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಕಾಶ್ಮೀರ ಸಮಸ್ಯೆಯನ್ನು ಎತ್ತಿ ಹಿಡಿದಿದ್ದು, ಇದನ್ನು ‘‘ಉರಿಯುತ್ತಿರುವ ಸಮಸ್ಯೆ’’ ಎಂದು ಕರೆದಿದ್ದಾರೆ.

 ಕಳೆದ ವರ್ಷ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿರುವುದನ್ನು ಟೀಕಿಸಿರುವ ಅವರು, ಅದರ ನಂತರ ಕೈಗೊಂಡ ಕ್ರಮಗಳು ‘‘ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿದೆ’’ ಎಂದು ಹೇಳಿದ್ದಾರೆ.

- Advertisement -

 ‘‘ದಕ್ಷಿಣ ಏಷ್ಯಾದ ಸ್ಥಿರತೆ ಮತ್ತು ಶಾಂತಿಗೆ ಪ್ರಮುಖವಾಗಿರುವ ಕಾಶ್ಮೀರ ಸಂಘರ್ಷ ಇನ್ನೂ ಉರಿಯುತ್ತಿರುವ ಸಮಸ್ಯೆಯಾಗಿದೆ’’ ಎಂದು ಅವರು ಹೇಳಿದ್ದಾರೆ.

 ‘‘ಕಾಶ್ಮೀರದ ಜನರ ನಿರೀಕ್ಷೆಗಳಿಗೆ ಅನುಗುಣವಾಗಿ, ವಿಶ್ವಸಂಸ್ಥೆಯ ನಿರ್ಣಯಗಳ ಚೌಕಟ್ಟಿನೊಳಗಿನ ಸಂವಾದದ ಮೂಲಕ ಈ ಸಮಸ್ಯೆಯನ್ನು ಪರಿಹರಿಸಲು ನಾವು ಸಿದ್ಧರಾಗಿದ್ದೇವೆ’’ ಎಂದು ಅವರು ಹೇಳಿದ್ದಾರೆ.

- Advertisement -