ಸಿಂಹದ ಗುಹೆಯೊಳಗೆ ಪ್ರವೇಶಿಸಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಭೂಪ !

Prasthutha|

ಹೈದರಾಬಾದ್​: ವ್ಯಕ್ತಿಯೋರ್ವ ಮೃಗಾಲಯದೊಳಗೆ ನುಗ್ಗಿ, ಸಿಂಹದ ಗುಹೆಯ ಮೇಲೆ ಕುಳಿತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

- Advertisement -

ಬಂಡೆಯ ಮೇಲೆ ವ್ಯಕ್ತಿ ಕುಳಿತಿದ್ದರೆ ಕೆಳಗಿನಿಂದ ಸಿಂಹವೊಂದು ಆತನನ್ನೇ ನೋಡುತ್ತಿದೆ. ಈ ಭಯಾನಕ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆ ವ್ಯಕ್ತಿಯನ್ನು ಸಾಯಿ ಕುಮಾರ್ ಎಂದು ಗುರುತಿಸಲಾಗಿದ್ದು,ಆತನನ್ನು  ಪೊಲೀಸರಿಗೆ ಒಪ್ಪಿಸಿ ಆತನ ವಿರುದ್ಧ ದೂರು ದಾಖಲಿಸಲಾಗಿದೆ.

- Advertisement -

ಸಾಯಿ ಕುಮಾರ್, ಸಾರ್ವಜನಿಕ ಪ್ರವೇಶವಿಲ್ಲದ ಸಿಂಹದ ಆವರಣದ ಒಳಗೆ ಜಿಗಿದಿದ್ದಾರೆ. ಬಳಿಕ ಬಂಡೆಯ ಮೇಲೆ ನಡೆದುಕೊಂಡು ಹೋಗಿದ್ದಾರೆ ಎಂದು ಹೈದರಾಬಾದ್​ ನೆಹರೂ ಝೂವಾಲಜಿಕಲ್ ಪಾರ್ಕ್ ನ ಸಿಬ್ಬಂದಿ ಹೇಳಿದ್ದಾರೆ.

Join Whatsapp