ಅಮೆರಿಕ ವಿರುದ್ಧ 10 ವಿಕೆಟ್​ಗಳ ಭಾರೀ ಜಯ ಸಾಧಿಸಿದ ಇಂಗ್ಲೆಂಡ್

Prasthutha|

ಬ್ರಿಡ್ಜ್ ಟೌನ್: ಟಿ 20 ವಿಶ್ವಕಪ್ ಸೂಪರ್ ಎಂಟು ಹಂತದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಅಮೆರಿಕ ವಿರುದ್ಧ 10 ವಿಕೆಟ್​ಗಳ ಭಾರೀ ಜಯ ಸಾಧಿಸಿದೆ. ಈ ಮೂಲಕ ಸೆಮಿಫೈನಲ್​ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿದೆ. ಅಮೆರಿಕ ಟೂರ್ನಿಯಿಂದ ಹೊರಬಿದ್ದಿದೆ.

- Advertisement -

ಕಳೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತಿದ್ದ ಇಂಗ್ಲೆಂಡ್‌ಗೆ ಇಂದಿನ ಪಂದ್ಯ ಗೆಲ್ಲಲೇಬೇಕಾದ ಪಂದ್ಯವಾಗಿತ್ತು. ನೆಟ್ ರನ್​ರೇಟ್ ಉತ್ತಮ ಪಡಿಸಿಕೊಳ್ಳಲು ಭಾರಿ ಅಂತರದ ಜಯವನ್ನೂ ಸಾಧಿಸಬೇಕಾಗಿತ್ತು. ಅದರಂತೆಯೇ ಆಗಿದೆ. ಇಂಗ್ಲೆಂಡ್ ತಂಡ ಕೇವಲ 9.5 ಓವರ್​ನಲ್ಲೇ ಗೆಲುವಿನ ದಡ ಮುಟ್ಟಿದೆ.

ಮೊದಲು ಬ್ಯಾಟ್ ಮಾಡಿದ ಅಮೆರಿಕ ತಂಡ 18.5 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 115 ರನ್​ಗಳಿಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ 9.5 ಓವರ್​ನಲ್ಲೇ 10 ವಿಕೆಟ್​ಗಳ ಜಯ ಸಾಧಿಸಿದೆ. ಇಂಗ್ಲೆಂಡ್​ ಪರ ನಾಯಕ ಜೋಸ್ ಬಟ್ಲರ್ ಮತ್ತು ಫಿಲ್ ಸಾಲ್ಟ್ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟ ನಡೆಸಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಮುಟ್ಟಿಸಿದರು. ಇಂಗ್ಲೆಂಡ್ ಪರ ಬಟ್ಲರ್ 38 ಎಸೆತಗಳಲ್ಲಿ 6 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ ಅಜೇಯ 83 ರನ್ ಬಾರಿಸಿದರೆ, ಫಿಲ್ ಸಾಲ್ಟ್ 21 ಎಸೆತಗಳಲ್ಲಿ 2 ಬೌಂಡರಿಗಳ ನೆರವಿನಿಂದ 25 ರನ್ ಕಲೆಹಾಕಿದರು.

- Advertisement -

ಈ ಅಮೋಘ ಗೆಲುವಿನ ಮೂಲಕ ಇಂಗ್ಲೆಂಡ್ ತಂಡ ನಾಲ್ಕು ಅಂಕಗಳೊಂದಿಗೆ ಸೂಪರ್ 8 ಸುತ್ತಿನ ತನ್ನ ಗುಂಪಿನಲ್ಲಿ ಅಗ್ರಸ್ಥಾನವನ್ನು ತಲುಪಿದೆ. ಪ್ರಸ್ತುತ ಇಂಗ್ಲೆಂಡ್‌ನ ನೆಟ್ ರನ್ ರೇಟ್ +1.992 ಆಗಿದ್ದು, ಇದು ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್‌ಗಿಂತ ಉತ್ತಮವಾಗಿದೆ.



Join Whatsapp