‘ರಾಮಾಯಣ’ದಲ್ಲಿ ಸತಿಪತಿಯಾದ ಸೋನಾಕ್ಷಿ ಸಿನ್ಹಾ ಹಾಗೂ ಝಹೀರ್ ಇಕ್ಬಾಲ್

Prasthutha|

ಮುಂಬೈ: ಬಾಲಿವುಡ್ ಅಂಗಳದಲ್ಲಿ ಚರ್ಚೆಗೆ ಕಾರಣವಾಗಿದ್ದ ನಟಿ ಸೋನಾಕ್ಷಿ ಸಿನ್ಹಾ ಹಾಗೂ ನಟ ಝಹೀರ್ ಇಕ್ಬಾಲ್ ಮದುವೆಯು ಮುಗಿದಿದೆ. 7 ವರ್ಷಗಳ ಪ್ರೀತಿಯನ್ನು ವಿವಾಹವಾಗಿ ಬದಲಾಯಿಸಿದ್ದಾರೆ. ಶತ್ರುಘ್ನ ಸಿನ್ಹಾ ಮನೆಯಲ್ಲೇ ಮದುವೆ ನಡೆದಿದೆ.

- Advertisement -

ಶತೃಘ್ನ ಸಿನ್ಹಾರ ನಿವಾಸ ‘ರಾಮಾಯಣ’ದಲ್ಲಿ ನಡೆದ ಅದ್ಧೂರಿ ವಿವಾಹ ಸಮಾರಂಭದಲ್ಲಿ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದರು.

ದಂಪತಿ ತಮ್ಮ ಮದುವೆಯ ಚಿತ್ರಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಪೋಸ್ಟ್ ಮಾಡಿದ್ದಾರೆ. ವಿಶೇಷ ವಿವಾಹ ಕಾಯಿದೆಯಡಿ ಇದು ನಾಗರಿಕ ವಿವಾಹವಾಗಿದೆ. ಮದುವೆ ಹಿಂದೂ ಅಥವಾ ಮುಸ್ಲಿಂ ಆಚರಣೆಗಳಿಂದ, ಧಾರ್ಮಿಕ ಸಂಪ್ರದಾಯಗಳಿಗಿಂತ ದೂರವಿತ್ತು.

- Advertisement -

ಝಹೀರ್‌ ತಂದೆ ಇಕ್ಬಾಲ್ ರತನ್ಸಿ, ಈ ವಿವಾಹವು ಹಿಂದೂ ಅಥವಾ ಮುಸ್ಲಿಂ ಸಂಪ್ರದಾಯಗಳನ್ನು ಅನುಸರಿಸುವುದಿಲ್ಲ ಎಂದು ಈ ಹಿಂದೆ ದೃಢಪಡಿಸಿದ್ದರು. ಇದು ಹಿಂದೂ ಅಥವಾ ಮುಸ್ಲಿಂ ಸಂಪ್ರದಾಯಗಳನ್ನು ಹೊಂದಿರುವುದಿಲ್ಲ. ಇದು ನಾಗರಿಕ ವಿವಾಹವಾಗಿರುತ್ತದೆ ಎಂದು ಹೇಳಿದ್ದರು. ಅವರು ಹೇಳಿದ ರೀತಿಯಲ್ಲಿ ಮದುವೆ ನಡೆದಿದೆ.

Join Whatsapp