ಹೈದರಾಬಾದ್: ತೆಲಂಗಾಣ ಮತ್ತು ಛತ್ತೀಸ್ಗಢ ಗಡಿ ಭಾಗದಲ್ಲಿ ಭದ್ರತಾ ಪಡೆಗಳು 6 ಮಂದಿ ಮಾವೋವಾದಿಗಳನ್ನು ಹತ್ಯೆ ಮಾಡಿರುವ ಬಗ್ಗೆ ವರದಿಯಾಗಿವೆ.
ಉಭಯ ರಾಜ್ಯಗಳ ಗಡಿಭಾಗದ ಜಿಲ್ಲೆಗಳಲ್ಲಿ ನಡೆದ ಎನ್ಕೌಂಟರ್ ನಲ್ಲಿ 6 ಮಂದಿ ಮಾವೋವಾದಿಗಳು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ.
ಛತ್ತೀಸ್ಗಢದ ಸುಕ್ಮಾ ಹಾಗು ತೆಲಂಗಾಣದ ಕೊಟ್ಟಗುಡಮ್ ತೆಲಂಗಾಣ ಗ್ರೇ ಹೂಂಡ್ಸ್ ಹಾಗು ಛತ್ತೀಸ್ಗಢ ಪೊಲೀಸರು ಬೆಳಗ್ಗೆ ಜಂಟಿ ಕಾರ್ಯಾಚರಣೆ ಕೈಗೊಂಡಿದ್ದರು. ಎನ್ಕೌಂಟರ್ ಚರ್ಲಾ ವಲಯದಿಂದ 25 ಕಿಲೋ ಮೀಟರ್ ದೂರದಲ್ಲಿರುವ ಕುರ್ನವಲ್ಲಿ-ಪೆಸರ್ಲಪಡು ಅರಣ್ಯ ಪ್ರದೇಶದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.ತೆಲಂಗಾಣ ಪೊಲೀಸರು 6 ಮಂದಿ ಮಾವೋವಾದಿಗಳು ಹತ್ಯೆಯಾಗಿರುವುದನ್ನು ಖಚಿತಪಡಿಸಿದ್ದಾರೆ.
ಈ ಪೈಕಿ ನಾಲ್ವರು ಮಹಿಳೆಯರಿದ್ದು, ಓರ್ವ ನಕ್ಸಲ್ ಕಮಾಂಡರ್ ಚರ್ಲಾ ಪ್ರದೇಶದ ಮಧು ಎಂದು ಗುರುತಿಸಲಾಗಿದೆ. ಪೊಲೀಸರು ಆರು ಮಂದಿಯ ನಕ್ಸಲರ ಮೃತದೇಹಗಳನ್ನು ವಶಕ್ಕೆ ಪಡೆದಿದ್ದಾರೆ. ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರಿದಿದೆ.