76 ಖ್ಯಾತ ವಕೀಲರಿಂದ ಹರಿದ್ವಾರದ ದ್ವೇಷ ಭಾಷಣಗಳ ವಿರುದ್ಧ ಸ್ವಯಂಪ್ರೇರಿತ ಕ್ರಮಕ್ಕಾಗಿ ಸುಪ್ರೀಂಕೋರ್ಟ್ ಗೆ ಪತ್ರ

Prasthutha|

ಕಳೆದ ವಾರ ಹರಿದ್ವಾರ ಮತ್ತು ದೆಹಲಿಯಲ್ಲಿ ನಡೆದ ಎರಡು ಸಭೆಗಳಲ್ಲಿ ಮಾಡಲಾಗಿರುವ ದ್ವೇಷ ಭಾಷಣಗಳು ಮಾಡಬಹುದಾದ ಅಪಾಯವನ್ನು ತಡೆಗಟ್ಟುವಂತೆ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ಎನ್.ವಿ. ರಮಣ ಅವರಿಗೆ 76 ಖ್ಯಾತ ವಕೀಲರು ಪತ್ರ ಬರೆದಿದ್ದಾರೆ. ಎರಡೂ ಸಭೆಗಳಲ್ಲಿ ಬಲಪಂಥೀಯ ಹಿಂದೂ ಧಾರ್ಮಿಕ ಮುಖಂಡರು ಭಾರತದ ಜನಾಂಗೀಯ ಶುದ್ಧೀಕರಣಕ್ಕೆ ಕರೆ ನೀಡಿದ್ದನ್ನು ಗಂಭೀರವಾಗಿ ಪರಿಗಣಿಸಿ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆ ಮಾಡುವಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ.

- Advertisement -

“ಈ ಎರಡು ಸಮಾರಂಭಗಳಲ್ಲಿ ಮಾಡಿದ ಭಾಷಣಗಳು ಕೇವಲ ದ್ವೇಷದ ಭಾಷಣಗಳಲ್ಲ. ಅವು ಈ ದೇಶದ ಸಮುದಾಯವೊಂದರ ಹತ್ಯೆಗೆ ನೀಡಿದ ಬಹಿರಂಗ ಕರೆಯಾಗಿದೆ” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

“ಎರಡು ಸಂದರ್ಭದ ದ್ವೇಷ ಭಾಷಣಗಳಿಗೆ ಸಂಬಂಧಿಸಿದಂತೆ IPC ಯ 153, 153A, 153B, 295A, 504, 506, 120B, 34 ರ ನಿಬಂಧನೆಗಳ ಅಡಿಯಲ್ಲಿ ಯಾವುದೇ ಪರಿಣಾಮಕಾರಿ ಕ್ರಮಗಳನ್ನು ಇನ್ನೂ ತೆಗೆದುಕೊಳ್ಳಲಾಗಿಲ್ಲ. ಆದ್ದರಿಂದ ಇಂತಹ ಘಟನೆಗಳನ್ನು ತಡೆಯಲು ತುರ್ತಾಗಿ ನ್ಯಾಯಾಂಗ ಹಸ್ತಕ್ಷೇಪ ಮಾಡಬೇಕಾದ ಅಗತ್ಯವಿದೆ” ಎಂದು ಕೂಡ ಪತ್ರದಲ್ಲಿ ಹೇಳಲಾಗಿದೆ. ಅಲ್ಲದೆ, ಹಿಂಸಾ ಪ್ರಚೋದಕ ಭಾಷಣಗಳನ್ನು ಉಲ್ಲೇಖಿಸುತ್ತಾ “ಈ ಭಾಷಣಗಳು ನಮ್ಮ ದೇಶದ ಏಕತೆ ಮತ್ತು ಸಮಗ್ರತೆಗೆ ಗಂಭೀರವಾದ ಬೆದರಿಕೆಯಾಗಿದೆ ಮತ್ತು ಮುಸ್ಲಿಂ ನಾಗರಿಕರ ಜೀವಕ್ಕೆ ಅಪಾಯವನ್ನುಂಟುಮಾಡುತ್ತವೆ” ಎಂದು ಪತ್ರದಲ್ಲಿ ಬರೆಯಲಾಗಿದೆ.

- Advertisement -

ಪತ್ರ ಬರೆದ ಪ್ರಮುಖರದಲ್ಲಿ ಪಾಟ್ನಾ ಹೈಕೋರ್ಟ್ ಮಾಜಿ ನ್ಯಾಯಾಧೀಶರಾಗಿರುವ ಅಂಜನಾ ಪ್ರಕಾಶ್, ವಕೀಲರಾದ ಸಲ್ಮಾನ್ ಖುರ್ಷಿದ್, ಪ್ರಶಾಂತ್ ಭೂಷಣ್ ಸೇರಿದಂತೆ ಅನೇಕ ಖ್ಯಾತರು ಇದ್ದಾರೆ.

ಹಿಂದೂ ಹಿಂದೂ ರಕ್ಷಣಾ ಸೇನೆಯ ಪ್ರಬೋಧಾನಂದ ಗಿರಿ ಎಂಬಾತ “ಮ್ಯಾನ್ಮಾರ್ ಮಾದರಿಯಲ್ಲಿ ಭಾರತವನ್ನು ಕೂಡಾ ಜನಾಂಗೀಯ ಶುದ್ಧೀಕರಣ ಮಾಡಬೇಕು” ಎಂದು ಕರೆ ನೀಡಿದ್ದನ್ನು ಪತ್ರದಲ್ಲಿ ಎತ್ತಿ ತೋರಿಸಲಾಗಿದೆ.

Join Whatsapp