MRPL ಸಂಸ್ಥೆಯ ನಿರ್ದೇಶಕರ ಇಮೇಲ್ ಹ್ಯಾಕ್: ಸಿಬ್ಬಂದಿಗಳ ವಾಟ್ಸಾಪ್ ನಂಬರ್ ಕೊಡುವಂತೆ ಮನವಿ !

Prasthutha|

ಮಂಗಳೂರು: ಎಮ್ ಆರ್ ಪಿಎಲ್  ಸಂಸ್ಥೆಯ ನಿರ್ದೇಶಕರ ಇಮೇಲ್ ಹ್ಯಾಕ್ ಮಾಡಿ ಸಂಸ್ಥೆಯ 350ಕ್ಕೂ ಅಧಿಕ ಸಿಬ್ಬಂದಿಗಳಿಗೆ ಫೇಕ್ ಇಮೇಲ್ ರವಾನೆ ಮಾಡಲಾಗಿದೆ.

- Advertisement -

ವ್ಯವಸ್ಥಾಪಕ ನಿರ್ದೇಶಕರಾದ  ಎಂ. ವೆಂಕಟೇಶ್ ಅವರ edirector@gmail.com ಮೇಲ್ ಐಡಿ ಹ್ಯಾಕ್ ಆಗಿದೆ.

ನಿರ್ದೇಶಕ ವೆಂಕಟೇಶ್ ಅವರ  ಮೇಲ್ ಮೂಲಕ ಸಿಬ್ಬಂದಿಗಳಿಗೆ ತಮ್ಮ ವಾಟ್ಸಾಪ್ ನಂಬರ್ ಕಳುಹಿಸುವಂತೆ ಮೇಲ್ ಬಂದಿದ್ದು, ಇದಕ್ಕೆ ಸಂಸ್ಥೆಯ 141 ಕ್ಕೂ ಅಧಿಕ ಸಿಬ್ಬಂದಿಗಳು ನಿರ್ದೇಶಕರ ಮೆಸೇಜ್ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ ಒಬ್ಬ ಸಿಬ್ಬಂದಿ ನೇರವಾಗಿ ನಿರ್ದೇಶಕರಿಗೆ ಫೋನ್ ಮೂಲಕ ಸಂಪರ್ಕಿಸಿ ಮಾಹಿತಿ ತಿಳಿಸಿದ್ದಾರೆ.

- Advertisement -

ಈ ವೇಳೆ ಮೇಲ್ ಐಡಿ ಹ್ಯಾಕ್ ಆಗಿರುವ ಬಗ್ಗೆ ಮಾಹಿತಿ ಬೆಳಕಿಗೆ ಬಂದಿದೆ. ಹ್ಯಾಕರ್ ತನ್ನ ವಾಟ್ಸ್ ಆಪ್ ಡಿಪಿಯಲ್ಲೂ ವೆಂಕಟೇಶ್ ಅವರ ಭಾವಚಿತ್ರ ಹಾಕಿರುದು ಬೆಳಕಿಗೆ ಬಂದಿದೆ.ಇದರ ಮೂಲಕ ಸಿಬ್ಬಂದಿಗಳೊಂದಿಗೆ ವ್ಯವಹರಿಸಿದ್ದಾನೆ.

ಈ ಬಗ್ಗೆ ಮಂಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.



Join Whatsapp