ಬೆಳ್ಳಾರೆ | ಪ್ರವಾದಿಯನ್ನು ನಿಂದಿಸಿದ ಆರೋಪಿಗೆ ನ್ಯಾಯಾಂಗ ಬಂಧನ

Prasthutha|

ಬೆಳ್ಳಾರೆ: ಪ್ರವಾದಿ ಪೈಗಂಬರರ ನಿಂದನೆ ಮಾಡಿದ ಪ್ರಕರಣಕ್ಕೆ ಬಂಧಿತನಾಗಿದ್ದ ಆರೋಪಿ ಜಗದೀಶ್ ಕೈವಲ್ತಡ್ಕನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ .ಐವರ್ನಾಡು ಮೂಲದ ಜಗದೀಶ್ ಕೈವಲ್ತಡ್ಕ ತನ್ನ ಫೇಸ್ ಬುಕ್ ಖಾತೆಯಲ್ಲಿ ಪೈಗಂಬರ್ ಮುಹಮ್ಮದ್‌ ರವರನ್ನು ಕಮೆಂಟ್ ಮೂಲಕ ಅವಹೇಳನಕಾರಿಯಾಗಿ ನಿಂದಿಸಿದ್ದ, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

- Advertisement -

ಆರೋಪಿ ಜಗದೀಶ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ SDPI ಪನ್ನೆಬೂತ್ ಉಪಾಧ್ಯಕ್ಷ ನೌಫಲ್ ಟಿ ಆರ್ ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೇ ಸುಳ್ಯ ತಾಲೂಕು ಮುಸ್ಲಿಂ ಒಕ್ಕೂಟ ಸಮಿತಿ ದ.ಕ.ಜಿಲ್ಲಾ ವರಿಷ್ಠಾಧಿಕಾರಿಗಳನ್ನು ಭೇಟಿಯಾಗಿ ಆರೋಪಿಯನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿತ್ತು.

ಪೊಲೀಸರು ಇದೇ ನ. ೧೫ರಂದು ಆರೋಪಿ ಜಗದೀಶ್ ನನ್ನು ಬಂಧಿಸಿ ಮಂಗಳವಾರ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ ಸುಳ್ಯ ಸಿವಿಲ್ ಕಿರಿಯ ನ್ಯಾಯಾಧೀಶ ಯಶ್ವಂತ್‌ಕುಮಾರ್ ೧೫ ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದ್ದಾರೆ.

Join Whatsapp