ನ್ಯೂಯಾರ್ಕ್: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲಿನ ಟ್ವಿಟ್ಟರ್ ನಿಷೇಧವನ್ನು ಹಿಂಪಡೆಯಲಾಗುವುದೆಂದು ಟ್ವಿಟ್ಟರ್ ನ ಮಾಲಕ ಎಲೋನ್ ಮಸ್ಕ್ ತಿಳಿಸಿದ್ದಾರೆ.
ದಿ ಫೈನಾನ್ಷಿಯಲ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಟ್ರಂಪ್ ಮೇಲಿನ ಶಾಶ್ವತ ನಿಷೇಧವನ್ನು ಹಿಂತೆಗೆದುಕೊಳ್ಳುತ್ತೇನೆ. ಟ್ವಿಟ್ಟರ್ ಖರೀದಿ ಇನ್ನೂ ಪೂರ್ಣಗೊಂಡಿಲ್ಲದ ಕಾರಣ ಟ್ರಂಪ್ ಅವರ ವಾಪಸಾತಿ ಸುಳ್ಳಲ್ಲ ಎಂದು ಅವರು ತಿಳಿಸಿದ್ದಾರೆ.
ಜಾಗತಿಕ ಮೆಸೇಜಿಂಗ್ ವೇದಿಕೆಗೆ ಟ್ರಂಪ್ ವಾಪಸಾತಿಗೆ ಮಸ್ಕ್ ಅನುಮೋದಿಸಿರುವುದು ದ್ವೇಷ ಹರಡುವ ಭಯ ಸಾಮಾಜಿಕ ಕಾರ್ಯಕರ್ತರಲ್ಲಿ ಮನೆಮಾಡಿದೆ.
ಜನವರಿ 6, 2021 ರಂದು ಚುನಾವಣಾ ವಂಚನೆ ಆರೋಪದ ಹಿನ್ನೆಲೆಯಲ್ಲಿ ಟ್ರಂಪ್ ಅವರನ್ನು ಟ್ವಿಟ್ಟರ್ ಮತ್ತು ಇತರೆ ಆನ್ ಲೈನ್ ಪ್ಲಾಟ್ ಫಾರ್ಮ್ ಗಳನ್ನು ನಿಷೇಧ ಹೇರಲಾಗಿತ್ತು.