ತಮಿಳುನಾಡು: ಸಣ್ಣ ಆನೆಮರಿಗೆ ಹಿರಿಯಾನೆಗಳು ಸೇರಿ ಅದ್ಭುತವಾದ ಭದ್ರತೆ ನೀಡಿದ ದೃಶ್ಯ ನೋಡುಗರ ಕಣ್ತುಂಬಿಸಿಕೊಳ್ಳುತ್ತಿದೆ.
ಆನೆಗಳ ಹಿಂಡಿನಲ್ಲಿ ಕಾಣುವ ಮುದ್ದಾದ ಮರಿಯಾನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಐಎಫ್ ಎಸ್ ಅಧಿಕಾರಿ ಸುಶಾಂತ್ ನಂದಾ ಎಂಬುವರು ತಮಿಳುನಾಡಿನ ಸತ್ಯಮಂಗಲಂ ಅಭಯಾರಣ್ಯದಲ್ಲಿ ಆನೆಗಳ ಗುಂಪಿನಲ್ಲಿ ಕಂಡುಬಂದ ಈ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ. ಮರಿ ಆನೆಗೆ ಗಜಪಡೆಯು ‘Z+’ ಸೆಕ್ಯೂರಿಟಿ ನೀಡಿದೆ ಎಂದು ಬರೆದುಕೊಂಡಿದ್ದಾರೆ.