ಎಲೆಕ್ಟ್ರಾನಿಕ್ಸ್ , ಮದ್ಯ , ಜವಳಿ ದರ ಶೇ. 8-10 ರಷ್ಟು ಹೆಚ್ಚಳಕ್ಕೆ ನಿರ್ಧಾರ

Prasthutha|

ನವದೆಹಲಿ: ಇಂಧನ, ಗ್ಯಾಸ್ ಬೆಲೆ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಇದೀಗ ಮತ್ತೆ ಬೆಲೆ ಏರಿಕೆಯ ಹೊಡೆತ ಬೀಳಲಿದೆ. ಎಲೆಕ್ಟ್ರಾನಿಕ್ಸ್ , ಮದ್ಯ , ಜವಳಿ ದರ ಏರಿಕೆಯ ಶಾಕ್ ಶೀಘ್ರವೇ ಉಂಟಾಗಲಿದೆ.
ಜವಳಿ ಉತ್ಪನ್ನ, ಎಲೆಕ್ಟ್ರಾನಿಕ್ಸ್, ಮದ್ಯದ ದರದಲ್ಲಿ ಶೇ.8ರಿಂದ ಶೇ10ರಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಉತ್ಪಾದಕ ಕಂಪೆನಿಗಳು ಹೆಚ್ಚುವರಿ ಉತ್ಪಾದನಾ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸಲು ನಿರ್ಧರಿಸಿರುವ ಕಾರಣ ಬೆಲೆ ಏರಿಕೆ ಬಿಸಿ ಗ್ರಾಹಕರಿಗೆ ತಟ್ಟಲಿದೆ.

- Advertisement -


ಕೋವಿಡ್ ಬಿಕ್ಕಟ್ಟಿನಿಂದ ಹಲವು ವಲಯಗಳ ವಹಿವಾಟುಗಳು ಇದೀಗಾಗಲೇ ಮುಚ್ಚಿ ಹೋಗಿದ್ದು, ಜನರು ಕಂಗಾಲಾಗಿದ್ದಾರೆ. ಇದರ ಮಧ್ಯೆ ಬೆಲೆ ಏರಿಕೆಯ ಹೊಡೆತ ಬೀಳಲಿದೆ. ಕಚ್ಚಾ ವಸ್ತುಗಳ ದರದಲ್ಲಿ ಹೆಚ್ಚಳವೂ ಬೆಲೆ ಏರಿಕೆಗೆ ಕಾರಣವಾಗಿದೆ. ಈಗಾಗಲೇ ದಿನಸಿ ವಸ್ತುಗಳು, ಪ್ಯಾಕೇಜ್ ಫುಡ್ ಗಳ ದರ ಏರಿಕೆಗೊಂಡಿದ್ದು ಹೊಸ ವರ್ಷಕ್ಕೆ ಮತ್ತೊಂದು ಸುತ್ತಿನ ಏರಿಕೆಯನ್ನು ಗ್ರಾಹಕರು ಎದುರಿಸಬೇಕಾದೀತು ಎಂದು ಅಂದಾಜಿಸಲಾಗಿದೆ.

ಸಗಟು ಹಣದುಬ್ಬರ ಇದೀಗ ಎರಡಂಕಿಗೆ ಇಳಿದಿದ್ದು, ಕಳೆದ ತಿಂಗಳು ಶೇ. 8.6 ರಷ್ಟಿತ್ತು. ಆದರೆ ಸೆಪ್ಟೆಂಬರ್ ಅವಧಿಯಲ್ಲಿ ಶೇ. 4.35ರ ಕೆಳಮಟ್ಟದಲ್ಲಿತ್ತು. ಇದುವರೆಗೂ ಸಗಟು ದರ ಮತ್ತು ರಿಟೇಲ್ ದರವನ್ನು ಗ್ರಾಹಕರಿಗೆ ವರ್ಗಾಯಿಸಿರಲಿಲ್ಲ, ಇಂಧನ ದರ ಹೆಚ್ಚಳ , ಕಚ್ಚಾ ಸಾಮಾಗ್ರಿಗಳ ದರ ಏರಿಕೆಯೂ , ಮದ್ಯದ ಉದ್ಯಮದಲ್ಲಿ ಗ್ಲಾಸ್ ಬಾಟಲಿಗಳ ದರ ಏರಿಕೆ, ಲಿಕ್ಕರ್ ತಯಾರಿಕೆಯ ವೆಚ್ಚದಲ್ಲಿಯೂ ಏರಿಕೆಯಾಗಿದೆ.



Join Whatsapp