ವಾಟ್ಸಾಪ್ ಸ್ಟೇಟಸ್ ಹಾಕಿ ಪಟ್ಟಣ ಪಂಚಾಯತಿ ಸದಸ್ಯೆ ಆತ್ಮಹತ್ಯೆ ಯತ್ನ!

Prasthutha|

ಚಿಕ್ಕಮಗಳೂರು: ವಾಟ್ಸಾಪ್ ಸ್ಟೇಟಸ್ ಹಾಕಿ ಪಟ್ಟಣ ಪಂಚಾಯಿತಿ ಸದಸ್ಯೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ನಡೆದಿದೆ.

- Advertisement -

ಜುಬೇದಾ, ಆತ್ಮಹತ್ಯೆಗೆ ಯತ್ನಿಸಿದ ಎನ್.ಆರ್.ಪುರ ಪಟ್ಟಣ ಪಂಚಾಯತಿ ಸದಸ್ಯೆ .

ಮಾತುಕತೆಯಂತೆ ಹಾಲಿ ಅಧ್ಯಕ್ಷೆ ಸುರಯ್ಯಾ ಭಾನು ಅಧ್ಯಕ್ಷೆಯ ಅಧಿಕಾರಾವಧಿ ಮುಗಿದಿದೆ. ಸುರಯ್ಯಾ ಬಾನು, ಅಧ್ಯಕ್ಷೆ ಸ್ಥಾನ ಬಿಟ್ಟುಕೊಡಲು ಮೀನಾಮೇಷ ಎಣಿಸುತ್ತಿದ್ದರು. ಸುರಯ್ಯಾ ಬಾನು ರಾಜೀನಾಮೆಗೆ ಪಕ್ಷದ ಮುಖಂಡರಲ್ಲೇ ಮುಸುಕಿನ ಗುದ್ದಾಟ ನಡೆದಿದ್ದು, ಇದರಿಂದ ಮನನೊಂದು ಜುಬೇದಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

- Advertisement -

5-6 ಬಗೆಯ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದು, ಎನ್.ಆರ್.ಪುರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಶಿವಮೊಗ್ಗಕ್ಕೆ ರವಾನೆ ಮಾಡಿದ್ದಾರೆ.

Join Whatsapp