ವಿದ್ಯುತ್ ಆಘಾತ : ಗಾಯಾಳುವಿಗೆ ಕೃತಕ ಉಸಿರಾಟ ಕೊಟ್ಟು ಬದುಕಿಸಿದ ಆಸೀಫ್

Prasthutha|

ಬೆಳ್ತಂಗಡಿ: ವಿದ್ಯುತ್ ಲೈನ್ ಗೆ ತಾಗಿಕೊಂಡಿರುವ ತೆಂಗಿನ ಮರದ ಗರಿಯನ್ನು ಎಳೆದು ಹಾಕಲು ಮರ ಹತ್ತಿದಾಗ ವಿದ್ಯುತ್ ಪ್ರವಹಿಸಿ ಯುವಕವೋರ್ವ ಗಾಯಗೊಂಡ ಘಟನೆ  ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಟಿ.ಬಿ.ಕ್ರಾಸ್ ಬಳಿ ನಡೆದಿದೆ .

- Advertisement -

ರಿಜ್ವಾನ್ ಗಾಯಗೊಂಡ ಯುವಕ. ರಿಜ್ವಾನ್ ವಿದ್ಯುತ್ ಪ್ರವಹಿಸಿ ಎಸೆಯಲ್ಪಟ್ಟು ಮನೆಯ ಅಂಗಳಕ್ಕೆ ಬಿದ್ದಿದ್ದಾನೆ.  ರಿಜ್ವಾನ್ ನ ಅಮ್ಮ ಬಂದು ಬೊಬ್ಬೆ ಹಾಕಿದ್ದಾರೆ. ತಕ್ಷಣ ಸ್ಥಳೀಯ ನಿವಾಸಿ ಆಸೀಫ್ ಕುಂಟಿನಿ ಸ್ಥಳಕ್ಕೆ ಧಾವಿಸಿ  ಪ್ರಾಣಹೋಗುವ ಪರಿಸ್ಥಿತಿಯಲ್ಲಿ 20 ನಿಮಿಷಗಳ ಕಾಲ ತನ್ನ ಬಾಯಿಯಿಂದ ರಿಜ್ವಾನ್ ಬಾಯಿಗೆ ಕೃತಕ ಉಸಿರಾಟ ನೀಡಿದಾಗ ಪುಜ್ಞೆ ಬಂದಿದೆ. ನಂತರ ಸ್ಥಳೀಯರು ಸೇರಿ ಉಜಿರೆ ಬೆನಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿದ್ಯುತ್ ಪ್ರವಾಹದಿಂದ ಹೊಟ್ಟೆ ಭಾಗ ಸುಟ್ಟ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾನೆಂದು ವೈದ್ಯರು ತಿಳಿಸಿದ್ದಾರೆ. ಪ್ರಾಣ ಉಳಿಸಿದ  ಅಸೀಫ್ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.



Join Whatsapp