ವಿಶ್ವದ ಅತಿದೊಡ್ಡ ರಾಷ್ಟ್ರ ಧ್ವಜ ಅನಾವರಣ ಮಾಡಿದ ಭಾರತೀಯ ಸೇನೆ!

Prasthutha|

ಹೊಸದಿಲ್ಲಿ: ಭಾರತೀಯ ಸೇನೆಯು ಗಾಂಧಿ ಜಯಂತಿಯ ಪ್ರಯುಕ್ತ ಲೇಹ್​ನ ಪರ್ವತದಲ್ಲಿ ಖಾದಿಯಿಂದ ತಯಾರಿಸಲಾದ ವಿಶ್ವದಲ್ಲೇ ಅತಿ ದೊಡ್ಡ ರಾಷ್ಟ್ರಧ್ವಜವನ್ನು ಅನಾವರಣಗೊಳಿಸಿದೆ. ಖಾದಿ ಹಾಗೂ ಗ್ರಾಮೋದ್ಯೋಗ ಆಯೋಗವು ಈ ರಾಷ್ಟ್ರ ಧ್ವಜವನ್ನು ತಯಾರಿಸಿದ್ದು, ಲೆಫ್ಟಿನಂಟ್​ ಗವರ್ನರ್​ ಆರ್.ಕೆ. ಮಾಥೂರ್​ ಅನಾವರಣಗೊಳಿಸಿದ್ದಾರೆ.

- Advertisement -

ಧ್ವಜವನ್ನು ಅನಾವರಣಗೊಳಿಸಿ ಮಾತನಾಡಿದ ಅವರು​, ನಮ್ಮ ಧ್ವಜವು ಏಕತೆ, ಮಾನವೀಯತೆ ಹಾಗೂ ದೇಶದ ಪ್ರತಿಯೊಬ್ಬರಿಂದಲೂ ಸ್ವೀಕರಿಸಲ್ಪಟ್ಟ ಸಂಕೇತವಾಗಿದೆ. ಇದು ದೇಶದ ಶ್ರೇಷ್ಟತೆಯ ಸಂಕೇತವಾಗಿದೆ. ಮುಂದಿನ ವರ್ಷಗಳಲ್ಲಿ ಈ ಧ್ವಜವು ಲೇಹ್​ನಲ್ಲಿ ನಮ್ಮ ಸೈನಿಕರಿಗೆ ಉತ್ಸಾಹದ ಸಂಕೇತವಾಗಿದೆ ಎಂದು ಹೇಳಿದ್ದಾರೆ.

ವೀಡಿಯೋ ವೀಕ್ಷಿಸಿ…

- Advertisement -

ಖಾದಿ ಹಾಗೂ ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷ ವಿನಯ್​ ಕುಮಾರ್ ಸಕ್ಸೇನಾ ಈ ತ್ರಿವರ್ಣ ಧ್ವಜವು ವಿಶ್ವದ ಅತಿದೊಡ್ಡ ರಾಷ್ಟ್ರೀಯ ಧ್ವಜ ಎಂದು ದೃಢೀಕರಿಸಿದ್ದಾರೆ.

ರಾಷ್ಟ್ರ ಧ್ವಜವು 225 ಅಡಿ ಉದ್ದ ಹಾಗೂ 150 ಅಡಿ ಅಗಲ ಹೊಂದಿದೆ. 37,500 ಚದರ ಮೀಟರ್​ ವಿಸ್ತೀರ್ಣ ಹೊಂದಿರುವ ಈ ಧ್ವಜವು 1400 ಕೆಜಿ ತೂಕ ಹೊಂದಿದೆ. ಈ ಧ್ವಜವನ್ನು ನಿರ್ಮಾಣ ಮಾಡಲು 49 ದಿನವನ್ನು ತೆಗೆದುಕೊಳ್ಳಲಾಗಿದೆ.



Join Whatsapp