ನಮ್ಮ ತಂಡವನ್ನು ತ್ರಿಪುರಾ ಸರ್ಕಾರ ದಿಗ್ಬಂಧನಕ್ಕೊಳಪಡಿಸಿದೆ ಎಂದು ಆರೋಪಿಸಿದ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್!

Prasthutha|

ಅಗರ್ತಲಾದಲ್ಲಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್‌ರ ಐಪಿಎಸಿ- ಭಾರತೀಯ ರಾಜಕೀಯ ಕ್ರಿಯಾ ಸಮಿತಿಯ 23 ಸದಸ್ಯರನ್ನು ಗೃಹ ಬಂಧನದಲ್ಲಿ ಇಡಲಾಗಿದೆ ಎಂದು ಸೋಮವಾರ ತೃಣಮೂಲ ಕಾಂಗ್ರೆಸ್ ಆಪಾದಿಸಿದೆ. ಬಂಗಾಳದ ಭಯದಲ್ಲಿ ಬಿಜೆಪಿ ತ್ರಿಪುರಾದಲ್ಲಿ ಒದ್ದಾಡುತ್ತಿದೆ ಎಂದೂ ಅವರು ಹೇಳಿದ್ದಾರೆ. ಆದರೆ ಅಗರ್ತಲಾ ಮೂಲದಿಂದ ಪೋಲೀಸರು ಇದೆಲ್ಲ ಕಟ್ಟು ಕತೆ ಎಂದು ತಿರಸ್ಕರಿಸಿದ್ದಾರೆ.

- Advertisement -

ಬಿಜೆಪಿಯ ದುರಾಡಳಿತದಿಂದ ಭಾರತದ ಪ್ರಜಾಪ್ರಭುತ್ವವು ಸಾವಿರ ಸಾವಿರ ಬಾರಿ ಸಾಯುತ್ತಿದೆ ಎಂದು ಟಿಎಂಸಿ ಒತ್ತಿ ಹೇಳಿದೆ. ಐಪಿಎಸಿ ಇದರ 23 ಸದಸ್ಯರನ್ನು ಅಗರ್ತಲಾದ ಒಂದು ಹೋಟೆಲಲ್ಲಿ ಇಡಲಾಗಿದೆ. ಅದು ಗೃಹ ಬಂಧನವಲ್ಲ ಎಂದು ಅಲ್ಲಿನ ಪೋಲೀಸರು ತಿಳಿಸಿದ್ದಾರೆ. ಕೊರೋನಾ ಕಾರಣದಿಂದಾಗಿ ಅವರ ದಾಖಲೆ ಪತ್ರಗಳನ್ನು ನೋಡಲು ಪೋಲೀಸರು ಹೋಗಿದ್ದರು ಅಷ್ಟೆ ಎಂದು ವಿಭಾಗೀಯ ಪೋಲೀಸು ಅಧಿಕಾರಿ ರಮೇಶಚಂದ್ರ ಯಾದವ್ ತಿಳಿಸಿದ್ದಾರೆ. ತ್ರಿಪುರಾಕ್ಕೆ ಹೊರಗಿನಿಂದ ಬರುವ ಎಲ್ಲರ ವಿಚಾರದಲ್ಲೂ ಈ ರೀತಿಯ ಪರಿಶೀಲನೆ ನಡೆಯುತ್ತದೆ ಎಂದೂ ಅವರು ಹೇಳಿದರು. ಅವರ ತಿರುಗಾಟಕ್ಕೆ ಯಾವ ನಿರ್ಬಂಧವನ್ನು ಸಹ ವಿಧಿಸಿಲ್ಲ ಹಾಗೂ ಯಾವುದೇ ಮೊಕದ್ದಮೆ ಹೂಡಿಲ್ಲ ಎಂದೂ ಅವರು ತಿಳಿಸಿದ್ದಾರೆ. ಮೇ ಒಂದರಿಂದ ತ್ರಿಪುರಾದಲ್ಲಿ ಕೊರೋನಾ ಕರ್ಫ್ಯೂ ಹೇರಲ್ಪಟ್ಟಿದೆ ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ತ್ರಿಪುರಾದಲ್ಲಿ 2023ರ ಫೆಬ್ರವರಿಯಲ್ಲಿ ನಡೆಯುವ ವಿಧಾನ ಸಭಾ ಚುನಾವಣೆಯ ತಂತ್ರಗಾರಿಕೆಗಾಗಿ ಪ್ರಶಾಂತ್ ಕಿಶೋರ್‌ರ ತಂಡ ತೊಡಗಿಕೊಂಡಿದೆ. ಸಮಸ್ಯೆಯನ್ನು ತೃಣಮೂಲ ಕಾರ್ಯಕರ್ತರು ಮಮತಾ ಬ್ಯಾನರ್ಜಿಯವರು ಹಾಗೂ ಪ್ರಶಾಂತ್ ಕಿಶೋರ್‌ರಿಗೆ ತಿಳಿಸಿದ್ದಾರೆ. ಸೋಮವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ದೆಹಲಿಗೆ ಬಂದಿದ್ದು, ಮುಖ್ಯವಾಗಿ ವಿರೋಧ ಪಕ್ಷಗಳ ಸಂಘಟನೆಯ ಕೆಲಸಕ್ಕೆ ಕೈ ಹಾಕಿದ್ದಾರೆ.



Join Whatsapp