ಪೌರತ್ವ ತಿದ್ದುಪಡಿ ಕಾಯ್ದೆಯ ನಿಯಮ ರೂಪಿಸಲು ಜನವರಿ 9 ರ ವರೆಗೆ ಅವಧಿ ಕೋರಿದ ಸರ್ಕಾರ

Prasthutha|

ನವದೆಹಲಿ ಜುಲೈ 27 : 2019 ರಲ್ಲಿ ಸಂಸತ್ತು ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾಯ್ದೆ (ಸಿ.ಎ.ಎ) ನಿಯಮಗಳನ್ನು ರೂಪಿಸಲು ಕೇಂದ್ರ ಸರ್ಕಾರ ಜನವರಿ 9 ರ ವರೆಗೆ ಅವಧಿ ವಿಸ್ತರಣೆ ಕೋರಿದೆಯೆಂದು ಗೃಹ ವ್ಯವಹಾರಗಳ ಸಚಿವ ನಿತ್ಯಾನಂದ್ ರೈ ಮಂಗಳವಾರ ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ಪೌರತ್ವ ನಿಯಮಾವಳಿ ಸಂದರ್ಭದಲ್ಲಿ ಕೈಗೊಂಡ ಕ್ರಮಗಳನ್ನು ರೂಪಿಸಲು ಸರ್ಕಾರ ವಿಫಲವಾಗಿದೆಯೇ? ಎಂಬ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಯವರ ಪ್ರಶ್ನೆಗೆ ಈ ಮೇಲಿನಂತೆ ಅವರು ಉತ್ತರಿಸಿದರು. ದಿನಾಂಕ 12.12.2019 ರಂದು ಪೌರತ್ವ ಕಾಯ್ದೆಯ ಅಧಿಸೂಚನೆ ಹೊರಡಿಸಿ 10.01.2020 ರಂದು ಜಾರಿಗೆ ತರಲಾಗಿದೆಯೆಂದು ಸಚಿವರು ತಿಳಿಸಿದರು. 2019 ರ ಪೌರತ್ವ ತಿದ್ದುಪಡಿ ಕಾಯ್ದೆಯಡಿ ನಿಯಮ ರೂಪಿಸುವ ನಿಟ್ಟಿನಲ್ಲಿ ಹೆಚ್ಚಿನ ಸಮಯವನ್ನು ವಿಸ್ತರಿಸುವಂತೆ ವಿಧಾನಸಭೆ, ಲೋಕಸಭಾ ಮತ್ತು ರಾಜ್ಯಸಭೆಯ ಸಮಿತಿಯನ್ನು ಕೋರಲಾಗಿದೆಯೆಂದು ರೈ ಹೇಳಿದರು.
.
ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿ ಕಿರುಕುಳಕ್ಕೊಳಗಾದ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವವನ್ನು ನೀಡುವ ಯೋಜನೆಯಾಗಿದೆ ಸಿ.ಎ.ಎ ಎಂದು ಸರಕಾರ ಹೇಳುತ್ತಿದೆ. ಇದರ ಪ್ರಕಾರ ಈ ದೇಶಗಳ ಅಲ್ಪಸಂಖ್ಯಾತ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಕ್ರೈಸ್ತ, ಪಾರ್ಸಿಗಳಿಗೆ ಭಾರತೀಯ ಪೌರತ್ವ ನೀಡಲಾಗುವುದು. ಧಾರ್ಮಿಕ ಕಿರುಕುಳವನ್ನು ಎದುರಿಸುತ್ತಿರುವ ಈ ಮೇಲಿನ ಸಮುದಾಯಗಳು 2014 ಡಿಸೆಂಬರ್ 31 ರ ವರೆಗೆ ಭಾರತದಲ್ಲಿರುವ ಹಿನ್ನೆಲೆಯಲ್ಲಿ ಅವರನ್ನು ಅಕ್ರಮ ವಲಸಿಗರೆಂದು ಪರಿಗಣಿಸದೆ ಪೌರತ್ವ ನೀಡಲಾಗುತ್ತದೆ.

- Advertisement -

ಆ ಕಾನೂನಿನ ನಿಯಮಗಳನ್ನು ರೂಪಿಸಲು ಸರ್ಕಾರ ಸತತ ಐದನೇ ಅವಧಿಗೆ ವಿಸ್ತರಣೆ ಕೋರಿದೆ. ಸಂಸತ್ತಿನ ಕೈಪಿಡಿಯ ಪ್ರಕಾರ ಯಾವುದೇ ಶಾಸನದ ನಿಯಮಗಳನ್ನು ರೂಪಿಸಲು ಅಥವಾ ವಿಸ್ತರಣೆ ಮಾಡಲು 6 ತಿಂಗಳೊಳಗೆ ರಾಷ್ಟ್ರಪತಿಗಳ ಒಪ್ಪಿಗೆ ಅಗತ್ಯವಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಂಸತ್ತು ಅಂಗೀಕರಿಸಿದ ನಂತರದಲ್ಲಿ ದೇಶದೆಲ್ಲೆಡೆ ವ್ಯಾಪಕವಾದ ಹಿಂಸಾತ್ಮಕ ಪ್ರತಿಭಟನೆಗೆ ಸಂಬಂದಿಸಿದ ಪೊಲೀಸ್ ಗುಂಡಿನ ದಾಳಿ ಮತ್ತು ಹಿಂಸಾಚಾರದಿಂದ 100 ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು.

Join Whatsapp