ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್​ ಮೇಲುಗೈ: ‘Well done’​ ಎಂದ ರಾಹುಲ್​ ಗಾಂಧಿ

Prasthutha|

- Advertisement -

ನವದೆಹಲಿ: ರಾಜ್ಯ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿಗಿಂತ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್​ ಮೇಲುಗೈ ಸಾಧಿಸಿದ್ದು, ರಾಹುಲ್​ ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿ, ಕರ್ನಾಟಕ ಕಾಂಗ್ರೆಸ್​ ಗೆ ಅಭಿನಂದನೆ ಎಂದಿದ್ದಾರೆ.

ನಗರ ಸಭೆ, ಪುರಸಭೆ,ಪಟ್ಟಣ ಪಂಚಾಯ್ತಿಗೆ ಡಿಸೆಂಬರ್​ 27ರಂದು ಚುನಾವಣೆ ನಡೆದಿತ್ತು. ಅದರ ಫಲಿತಾಂಶ ಬಹಿರಂಗಗೊಂಡಿದ್ದು, ಒಟ್ಟು 1,184 ವಾರ್ಡ್​ಗಳ ಪೈಕಿ ಕಾಂಗ್ರೆಸ್​​ 498, ಬಿಜೆಪಿ 437 ಜೆಡಿಎಸ್​ 45 ಹಾಗೂ ಇತರ 204 ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿದ್ದಾರೆ. ರಾಜ್ಯದಲ್ಲಿ ಆಡಳಿತರೂಢ ಪಕ್ಷ ಬಿಜೆಪಿಯಾಗಿದ್ದರೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್​ ಮೇಲುಗೈ ಸಾಧಿಸಿದ್ದಕ್ಕಾಗಿ ಪಕ್ಷದ ಮುಖಂಡ ರಾಹುಲ್​ ಗಾಂಧಿ ವೆಲ್​ ಡನ್​ ಎಂದು ಟ್ವೀಟ್​ ಮಾಡಿ ಅಭಿನಂದಿಸಿದ್ದಾರೆ.

Join Whatsapp