ಪೆರಲ್ದಾರ ಕಟ್ಟೆ: ಎಸ್‌ಡಿಪಿಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ಅವರಿಂದ ಚುನಾವಣಾ ಪ್ರಚಾರ ಸಭೆ

Prasthutha|

ಬೆಳ್ತಂಗಡಿ: ಕರ್ನಾಟಕದ ವಿಧಾನಸಭಾ ಚುನಾವಣೆಯ ಪ್ರಯುಕ್ತ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಎಸ್‌ಡಿಪಿಐ ಅಭ್ಯರ್ಥಿ ಅಕ್ಬರ್ ಅವರಿಂದ ಪ್ರಚಾರ ಸಭೆ ಪೆರಲ್ದಾರ ಕಟ್ಟೆಯ ಮಂಜೊಟ್ಟಿಯಲ್ಲಿ ನಡೆಯಿತು.

- Advertisement -
  ಸಭೆಯಲ್ಲಿ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ಅವರು ಭಾಗವಹಿಸಿ ಮಾತನಾಡಿ  ರಾಜ್ಯ ಸರ್ಕಾರದ ದುರಾಡಳಿತದಿಂದ ಜನರು ಬೇಸತ್ತು ಹೋಗಿದ್ದಾರೆ, ಜೊತೆಗೆ ಕಳೆದ 5 ವರ್ಷಗಳಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಆದ ಹಗರಣ, ಆಡಳಿತ ವಿರೋಧಿ ಕಾರ್ಯಗಳನ್ನು ಗಮನಿಸಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಜನತೆ ಎಸ್‌ಡಿಪಿಐ ಪಕ್ಷಕ್ಕೆ ಮತ ನೀಡಿ ಅತ್ಯಂತ ಅಧಿಕ ಮತಗಳ ಅಂತರದಿಂದ ಗೆಲ್ಲಿಸುವಂತೆ ವಿನಂತಿಸಿದರು.

ನಂತರ ಮಾತನಾಡಿದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ನವಾಝ್ ಕಟ್ಟೆ, ಬಿಜೆಪಿಯಿಂದ ಬೇಸತ್ತ ಜನತೆ ಎಸ್‌ಡಿಪಿಐ ಪಕ್ಷದ ಮೇಲೆ ಹೆಚ್ಚಿನ ಒಲವು ತೋರಿದ್ದಾರೆ. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲುವುದು ಖಚಿತ. ಎಸ್‌ಡಿಪಿಐ ಪಕ್ಷವು ಪ್ರಜಾಪ್ರಭುತ್ವದ ತಳಹದಿ ಮೆಲೆ ಕಾರ್ಯ ನಿರ್ವಹಿಸುತ್ತಿದೆ. ತ್ಯಾಗ, ಬಲಿದಾನಗಳ ತತ್ವ ಅಳವಡಿಸಿಕೊಂಡಿದೆ ಎಂದರು. ಜನಸಾಮಾನ್ಯರ ನೋವು, ನಲಿವುಗಳಿಗೆ ಸ್ಪಂದಿಸಿ ಜನರ ಜೀವನಮಟ್ಟ ಮೇಲೆತ್ತುವ ನಿಟ್ಟಿನಲ್ಲಿ ಅನೇಕ ಜನಪರ ಕೆಲಸ ಪಕ್ಷ ಮಾಡಿದೆ ಎಂದರು.

ಪೆರಲ್ದಾರ ಕಟ್ಟೆಯಲ್ಲಿ ಅಕ್ಬರ್ ಬೆಳ್ತಂಗಡಿ ಅವರು ಮನೆಗಳಿಗೆ ತೆರಳಿ ಮತಯಾಚನೆ ನಡೆಸಿದರು 

ಈ ಸಂದರ್ಭದಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಶ್ರಫ್ ಕಟ್ಟೆ, ಬಳಂಜ ಪಂಚಾಯತ್ ಸದಸ್ಯರಾದ ನಿಜಾಮ್ ಕಟ್ಟೆ, ತೆಂಕಕರಂದೂರು ಗ್ರಾಮ ಸಮಿತಿ ಪದಾಧಿಕಾರಿಗಳಾದ ಹಸನ್ ಗಿಂಡಾಡಿ, ನಿಯಾಝ್ ಕಟ್ಟೆ, ಅಶ್ರಫ್ ಬದ್ಯಾರು,  ಬೂತ್ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು, ಹಿತೈಷಿಗಳು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.