ಬರ್ಮಿಂಗ್ ಹ್ಯಾಮ್: ಕಾಮನ್‌ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಭಾರತ ಇಬ್ಬರು ಸ್ಪರ್ಧಿಗಳು ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
17. 3 ಮೀಟರ್ ದೂರ ಹಾರಿದ ಕೇರಳದ ಎಲ್ದೋಸ್ ಪೌಲ್ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡರೆ, ಕೇವಲ ಒಂದು ಸೆಂಟಿ ಮೀಟರ್ ದೂರದ ಅಂತರದಲ್ಲಿ ಸ್ಪರ್ಧೆ ಮುಗಿಸಿದ ಭಾರತದ ಅಬ್ದುಲ್ಲಾ ಅಬೂಬಕರ್ (17.2 ಮೀ.) ಬೆಳ್ಳಿ ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಿಸಿದರು.
ಈ ವಿಭಾಗದಲ್ಲಿ ಫೈನಲ್‌ಗೆ ಅರ್ಹೆತ ಪಡೆದಿದ್ದ ಭಾರತದ ಮತ್ತೋರ್ವ ಸ್ಪರ್ಧಿ ಚಿತ್ರವೇಲ್, 16.89 ಮೀಟರ್ ದೂರ ದಾಖಲಿಸುವ ಮೂಲಕ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.