ವೃದ್ಧೆಯ ಸಾಮೂಹಿಕ ಅತ್ಯಾಚಾರ ಎಸಗಿ ಅಂಗಾಗ ಕತ್ತರಿಸಿ ಹತ್ಯೆ: ನಾಲ್ವರು ಅರೆಸ್ಟ್

Prasthutha|

ಪಾಟ್ನಾ: ಬಿಹಾರದ ನವಾಡದಲ್ಲಿ ಅಮಾನವೀಯ ಕೃತ್ಯ ನಡೆದಿದ್ದು, ವೃದ್ಧೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಸ್ತನ ಕತ್ತರಿಸಿ ಕೊಲೆ ಮಾಡಿದ್ದಾರೆ. ಪ್ರಕರಣವನ್ನು ಭೇದಿಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

- Advertisement -

ಸುನೀಲ್ ಯಾದವ್, ವಿಪಿನ್ ಯಾದವ್, ಪಿಂಟು ಯಾದವ್ ಮತ್ತು ನಿರಂಜನ್ ಯಾದವ್ ಬಂಧಿತರು. ಐದನೇ ಆರೋಪಿ ಕರು ಯಾದವ್ ತಲೆಮರೆಸಿಕೊಂಡಿದ್ದಾನೆ.

60 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದು, ಆಕೆಯ ಸ್ತನಗಳನ್ನು ಕತ್ತರಿಸಿ ಕತ್ತು ಸೀಳಿದ್ದಾರೆ. ಡಿಸೆಂಬರ್ 25 ರಂದು ಈ ಘಟನೆ ನಡೆದಿದೆ.

- Advertisement -

ಸಂತ್ರಸ್ತ ಮಹಿಳೆ ಗಯಾ ಜಿಲ್ಲೆಯ ಜಹಾನಾ ಗ್ರಾಮದ ನಿವಾಸಿ. ಪತಿಯೊಂದಿಗೆ ನಾವಡದಲ್ಲಿರುವ ಸಂಬಂಧಿಯನ್ನು ಭೇಟಿಯಾಗಲು ಬಂದಿದ್ದರು. ಅವರು ಡಿಸೆಂಬರ್ 25 ರಂದು ರೈಲಿನಲ್ಲಿ ನಾವಡ ತಲುಪಿದ ನಂತರ, ಆಕೆಯ ಪತಿ ತನ್ನ ಮೊಬೈಲ್ ಫೋನ್ ಅನ್ನು ರೀಚಾರ್ಜ್ ಮಾಡಲು ಹತ್ತಿರದ ಅಂಗಡಿಗೆ ಹೋಗಿದ್ದರು, ಮಹಿಳೆ ರಸ್ತೆಯಲ್ಲಿ ಕಾಯುತ್ತಿದ್ದರು.

ಅದೇ ಸಮಯದಲ್ಲಿ ಶವಯಾತ್ರೆ ನಡೆಯುತ್ತಿದ್ದರಿಂದ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಗಂಡ ಅಂಗಡಿಯಿಂದ ಹಿಂತಿರುಗಿದ ನಂತರ ಹೆಂಡತಿ ಕಾಣಲಿಲ್ಲ ಎಂದು ನಾವಡದ ಎಸ್‌ಡಿಪಿಒ ಸದರ್ ಅಜಯ್ ಪ್ರಸಾದ್ ಹೇಳಿದ್ದಾರೆ.

Join Whatsapp