ಕಾಂಗ್ರೆಸ್ ಸೇರೋದಿಲ್ಲ: ವದಂತಿಗೆ ಬ್ರೇಕ್ ಹಾಕಿದ ವಿ. ಸೋಮಣ್ಣ

Prasthutha|

ಬೆಂಗಳೂರು: ಮಾಜಿ ಸಚಿವ ವಿ. ಸೋಮಣ್ಣ ಕಾಂಗ್ರೆಸ್ ಸೇರ್ವಡೆ ಆಗಲಿದ್ದಾರೆ, ಲೋಕ ಸಭೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂದು ಎನ್ನಲಾಗುತ್ತಿತ್ತು. ಆದ್ರೇ ನಾನು ಕಾಂಗ್ರೆಸ್ ಸೇರೋದಿಲ್ಲ. ಕೆಲವೇ ದಿನಗಳಲ್ಲಿ ಸಮಸ್ಯೆ ಕ್ಲಿಯರ್ ಆಗಲಿದೆ ಎಂದು ಹೇಳುವ ಮೂಲಕ ಅವರು ವಂದತಿಗಳಿಗೆ ಬ್ರೇಕ್ ಹಾಕಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾನು ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಎನ್ನುವುದು ಕೇವಲ ವದಂತಿಯಷ್ಟೇ. ನಾನು ಯಾವತ್ತೂ ಕಾಂಗ್ರೆಸ್ ಅಭ್ಯರ್ಥಿಯಲ್ಲ. ಕಾಂಗ್ರೆಸ್ ಪಕ್ಷಕ್ಕೆ ಸೇರೋದು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ನಾಯಕರು ಎರಡು ಬಾರಿ ಕರೆ ಮಾಡಿ ನನ್ನೊಂದಿಗೆ ಮಾತನಾಡಿದ್ದಾರೆ. ಅವರ ಮಾತಿಗೆ ನಾನು ಬದ್ಧನಾಗಿದ್ದೇನೆ. ನನ್ನ ಮೇಲೆ ದಗಾಪ್ರಹಾರ ಆಗದಂತೆ ಸೂಚನೆ ನೀಡುವಂತೆ ಹೇಳಿದ್ದೇನೆ. ಅದಕ್ಕೆ ಅವರು ಒಪ್ಪಿಕೊಂಡಿದ್ದಾರೆ. ಜನವರಿ 10ರೊಳಗೆ ಎಲ್ಲವೂ ಬಗೆಹರಿಯುತ್ತದೆ ಎಂದು ತಿಳಿಸಿದರು.

Join Whatsapp