ತಮ್ಮ ಗುಂಪಿಗೆ ‘ಶಿವಸೇನೆ ಬಾಳಾಸಾಹೇಬ್’ ಎಂದು ಹೆಸರಿಟ್ಟ ಏಕನಾಥ್ ಶಿಂಧೆ ಬಣ

Prasthutha|

ಮುಂಬೈ: ಉದ್ಧವ್ ಠಾಕ್ರೆ ನೇತೃತ್ವದ ಸರಕಾರವನ್ನು ವಿಧಾನಸಭೆಯಿಂದ ಅನರ್ಹಗೊಳಿಸುವಂತೆ ಒತ್ತಾಯಿಸುತ್ತಿರುವ ನಡುವೆಯೇ, ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರು ಶನಿವಾರ ತಮ್ಮ ಗುಂಪನ್ನು ‘ಶಿವಸೇನೆ ಬಾಳಾಸಾಹೇಬ್’ ಎಂದು ಹೆಸರಿಸಿದ್ದಾರೆ.

- Advertisement -

“ನಮ್ಮ ಗುಂಪನ್ನು ಶಿವಸೇನೆ ಬಾಳಾಸಾಹೇಬ್ ಎಂದು ಕರೆಯಲಾಗುವುದು. ನಾವು ಯಾವುದೇ ಪಕ್ಷದೊಂದಿಗೆ ವಿಲೀನಗೊಳ್ಳುವುದಿಲ್ಲ” ಎಂದು ಶಿವಸೇನೆಯ ಬಂಡಾಯ ಶಾಸಕ ದೀಪಕ್ ಕೇಸರ್ಕರ್ ಹೇಳಿದ್ದಾರೆ.

ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ಕಾರ್ಯಕಾರಿ ಸಭೆಯ ನಡುವೆ ಏಕನಾಥ್ ಶಿಂಧೆ ಗುಂಪಿನಿಂದ ಈ ನಿರ್ಧಾರ ಬಂದಿದೆ.

Join Whatsapp