ಡ್ರಗ್ಸ್ ದಂಧೆ: ಮಹಿಳೆ ಸೇರಿದಂತೆ ಎಂಟು ಮಂದಿಯ ಬಂಧನ

Prasthutha|

ಕೊಚ್ಚಿ: ಹೋಟೆಲೊಂದರಲ್ಲಿ ಬಾಡಿಗೆಗೆ ರೂಮ್ ಖರೀದಿಸಿ ಅಮಲು ಪದಾರ್ಥಗಳನ್ನು  ಮಾರಾಟ ಮಾಡುತ್ತಿದ್ದ  ಮಹಿಳೆ ಸೇರಿದಂತೆ ಎಂಟು ಜನರ ತಂಡವನ್ನು ಅಬಕಾರಿ ಮತ್ತು ಕಸ್ಟಮ್ಸ್ ಅಧಿಕಾರಿಗಳು  ದಾಳಿ ನಡೆಸಿ ಬಂಧಿಸಿದ ಘಟನೆ ಎರ್ನಾಕುಳಂನಲ್ಲಿ ನಡೆದಿದೆ.

- Advertisement -

55 ಗ್ರಾಂ ಎಂಡಿಎಂಎ ಯನ್ನು ತನಿಖಾ ತಂಡವು ವಶಪಡಿಸಿಕೊಂಡಿದೆ. , ಡ್ರಗ್ಸ್ ಮಾರಾಟ ಮಾಡಲು ಬಂದಿದ್ದ ನಾಲ್ವರು ಮತ್ತು ಅದನ್ನು ಖರೀದಿಸಲು ಬಂದಿದ್ದ ನಾಲ್ವರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಗ್ಯಾಂಗ್ ಬಳಸಿದ ಮೂರು ಕಾರುಗಳು ಮತ್ತು ಅದರಲ್ಲಿದ್ದ ಅಮಲು ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಆಲುವಾ, ಮಲಪ್ಪುರಂ, ಕೊಲ್ಲಂ, ತ್ರಿಶೂರ್, ಆಲಪ್ಪುಝ ಮತ್ತು ಕಣ್ಣೂರು ಮೂಲದವರಾಗಿದ್ದು ಎರ್ನಾಕುಳಂನ ಹೋಟೆಲ್ ನಲ್ಲಿ ಕೊಠಡಿಯನ್ನು ಬಾಡಿಗೆಗೆ ಪಡೆದು ಡ್ರಗ್ಸ್ ಡೀಲ್ ಮಾಡುತ್ತಿದ್ದರೆನ್ನಲಾಗಿದೆ. ಆನ್ ಲೈನ್ ನಲ್ಲಿ ಹೋಟೆಲ್ ಕೋಣೆಯನ್ನುಬುಕ್ ಮಾಡುತ್ತಿದ್ದ ಬಗ್ಗೆ ಸುಳಿವು ಲಭಿಸಿದ ಹಿನ್ನೆಲೆಯಲ್ಲಿ  ಅಧಿಕಾರಿಗಳು ನಿಗಾ ಇಟ್ಟಿದ್ದು ಇಂದು ಮುಂಜಾನೆ ಹೋಟೆಲ್ ನಲ್ಲಿ ಮಿಂಚಿನ ಶೋಧ ನಡೆಸಿದ್ದಾರೆ. ಆರೋಪಿಗಳು ಅಮಲು ಪದಾರ್ಥಗಳನ್ನು ಬೆಂಗಳೂರಿನಿಂದ ಆಮದು ಮಾಡಿಕೊಳ್ಳುತ್ತಿದ್ದುದಾಗಿ ತನಿಖಾ ತಂಡಕ್ಕೆ ಬಹಿರಂಗಪಡಿಸಿದ್ದಾರೆ ಎಂದು ತಿಳಿದುಬಂದಿದೆ.

Join Whatsapp