ಅಮೆಮಾರ್ ಬದ್ರಿಯಾ ಮಸೀದಿ: ಈದ್ ಮಿಲಾದ್ ಆಚರಣೆ ಹಾಗೂ ನೂತನ ಕಟ್ಟಡಕ್ಕೆ ಶಿಲಾನ್ಯಾಸ

Prasthutha|

ಫರಂಗಿಪೇಟೆ: ಬದ್ರಿಯಾ ಮದರಸ ಮತ್ತು ಜುಮ್ಮಾ ಮಸೀದಿ ಅಮೆಮಾರ್ ವತಿಯಿಂದ ಈದ್ ಮಿಲಾದ್ ಆಚರಣೆ ಅಂಗವಾಗಿ ಇಶ್ಕೇ ಮೀಲಾದ್ ಇಸ್ಲಾಮಿಕ್ ಸಾಂಸ್ಕೃತಿಕ ಕಾರ್ಯಕ್ರಮ, ರ್ಯಾಲಿ ಮತ್ತು ನೂತನ ವಾಣಿಜ್ಯ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಇಂದು ನಡೆಯಿತು

- Advertisement -

ಸಯ್ಯದ್ ಹಸನ್ ತಂಗಳ್ ಬಾಅಲವಿ ಕುಕ್ಕಾಜೆ ನೂತನ ಬದ್ರಿಯಾ ವಾಣಿಜ್ಯ ಕಟ್ಟಡಕ್ಕೆ ಶಿಲಾನ್ಯಾಸಗೈದರು. ಮಸೀದಿ ಆಡಳಿತ ಮಂಡಳಿ ಸಮಿತಿ ಅಧ್ಯಕ್ಷ ಉಮರಬ್ಬ ಎಎಸ್ಬಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ರ್ಯಾಲಿಗೆ ಚಾಲನೆ ನೀಡಿದರು. ಖತೀಬ್ ಮೊಹಮ್ಮದ್ ಆಲಿ ಫೈಝಿ ಇರ್ಫಾನಿ ಪ್ರವಾದಿ ಪೈಗಂಬರ್ ರವರ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಮಸೀದಿ ಆಡಳಿತ ಸಮಿತಿ ಉಪಾಧ್ಯಕ್ಷ ಅಬ್ದುಲ್ ಖಾದರ್ ಎಫ್. ಎ, ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್, ಜೊತೆ ಕಾರ್ಯದರ್ಶಿ ಮೊಹಮ್ಮದ್ ಶಾಫಿ, ಕೋಶಾಧಿಕಾರಿ ಅಬ್ದುಲ್ ರಜಾಕ್, ಲೆಕ್ಕಪರಿಶೋಧಕ ಬಶೀರ್ ತಂಡೇಲ್, ಸದಸ್ಯರಾದ ಹೈದರ್,ಇಕ್ಬಾಲ್, ಹನೀಫ್, ಇಬ್ರಾಹಿಂ, ಜಮಾಲ್, ಅಬ್ದುಲ್ ಕುಞ, ಖಾದರ್, ಸದರ್ ಮುಅಲ್ಲಿಮ್ ಅಬೂಬಕ್ಕರ್ ಸಿದ್ದೀಕ್ ದಾರಿಮಿ, ಮದರಸ ಅದ್ಯಾಪಕರಾದ ಇಕ್ಬಾಲ್ ಆಶ್ರಫಿ, ಇಸ್ಮಾಯಿಲ್ ಯಮಾನಿ, ಅಬ್ದುಲ್ ಹಮೀದ್ ಅರ್ಶದಿ, ಸಾದಿಕ್ ಫೈಝಿ, ಅಬೂಬಕ್ಕರ್ ಮದನಿ, ಅಬ್ದುಲ್ ಮಜೀದ್ ಮುಸ್ಲಿಯಾರ್ ಮತ್ತಿತರರು ಉಪಸ್ಥಿತರಿದ್ದರು

Join Whatsapp