ಪಂಜಿಮೊಗರು: ಇಹ್ಸಾನ್ ವೆಲ್ಫೇರ್ ಟ್ರಸ್ಟ್ (ರಿ) ವತಿಯಿಂದ ಪ್ರೊಜೆಕ್ಟ್ ಪಾನಿ ಯೋಜನೆಯ ಉದ್ಘಾಟನಾ ಶುಭ ಸಮಾರಂಭವು ಪಂಜಿಮೊಗರು ಜಂಕ್ಷನ್ ಪ್ರದೇಶದಲ್ಲಿ ನಡೆಯಿತು.
ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆಯನ್ನು ಕೂಳೂರು ನಾಗರೀಕ ಸಮಿತಿ ಇದರ ಗೌರವ ಅಧ್ಯಕ್ಷರಾದ ಡಾ: ಪುತ್ರನ್ ಸರ್ ನೆರವೇರಿಸಿದರು.
ಇಹ್ಸಾನ್ ವೇಲ್ಫೇರ್ ಟ್ರಸ್ಟ್ ಇದರ ಅಧ್ಯಕ್ಷರಾದ ನಿಸಾರ್ ಕೆ ಎಂ ಮಾತಾನಾಡಿ ಟ್ರಸ್ಟ್ ವತಿಯಿಂದ ನಡೆಯುವ ಎಲ್ಲಾ ಸಾಮಾಜಿಕ ಸೇವೆಗಳಾದ ನಾಗರೀಕ ಮಾಹಿತಿ ಕೇಂದ್ರ, ಪ್ರಾಜೆಕ್ಟ್ ಸೂಕೂನ್ (ಗೃಹ ಯೋಜನೆ) ಪ್ರೊಜೆಕ್ಟ್ ಪಾನಿ (ಶುದ್ಧ ಕುಡಿಯುವ ನೀರು) ಮತ್ತು ಅರ್ಹ ವಿದ್ಯಾರ್ಥಿಗಳಿಗೆ ಶಿಕ್ಷಣದ ವ್ಯವಸ್ಥೆಯನ್ನು ನಮ್ಮ ತಂಡ ನೆರೆವೇರಿಸಿ ಕೊಂಡು ಬರುತ್ತಿದೆ ಎಂದು ಹೇಳಿದರು.
ಡೈಜಿವಲ್ಡ್ ಚಾನೆಲ್ ಸಂಸ್ಥಾಪಕರಾದ ವಾಲ್ಟರ್ ನಂದಳಿಕೆ ಸರ್ ಮಾತಾಡುತ್ತ ಏನು ನಾವು ಈ ಸಮಾಜಕ್ಕೆ ಕೊಡುತ್ತೇವೆ ಏನು ಈ ಸಮಾಜದ ಕಟ್ಟ ಕಡೆಯ ಅತಿ ಬಡ ಕುಟುಂಬಕ್ಕೆ ಏನು ನಾವು ಸಹಾಯ ಮಾಡುತ್ತೇವೆ ಅದು ನಾವು ಈ ಲೋಕದಿಂದ ನಿರ್ಗಮನವಾದರೂ ಕೂಡ ನಾವು ಅದನ್ನು ನಮ್ಮೋಟ್ಟಿಗೆ ಕೊಂಡು ಒಯ್ಯುತ್ತೇವೆ , ಈ ಸಮಾಜದಲ್ಲಿ ಉಂಡು ಬದುಕಿ ಹೋದರೆ ಸಾಲದು ಈ ಸಮಾಜಕ್ಕೆ ಏನಾದರೂ ಒಂದು ಕೊಡುಗೆ ನೀಡಬೇಕು ಅ ಕೊಡುಗೆ ಇಹ್ಸಾನ್ ವೆಲ್ಫೇರ್ ಟ್ರಸ್ಟ್ ಯುವಕರು ನೀಡುತ್ತಿದ್ದಾರೆ ಎಂದು ಸಂತೋಷ ವ್ಯಕ್ತ ಪಡಿಸಿದರು.
ಧಾರ್ಮಿಕ ವಿದ್ವಾಂಸರು , ಖ್ಯಾತ್ಯ ವಾಗ್ಮಿ ಆದ ಬಶೀರ್ ಮದನಿ ಅಲ್ ಖಾಮಿಲ್ ಮಾತನಾಡುತ್ತಾ ಪ್ರಪಂಚದಲ್ಲಿ ಎರಡು ವಿಭಾಗದ ಜನರಿದ್ದಾರೆ, ಒಂದು ವಿಭಾಗ ತಾನು ಮತ್ತು ತನ್ನ ಕುಟುಂಬಕ್ಕೆ ಸೀಮಿತವಾದರೆ ಇನ್ನೊಂದು ವಿಭಾಗ ಸರ್ವ ಜನರ ಕಷ್ಟಗಳನ್ನು ನಿವಾರಿಸಲು ಹಗಲು ರಾತ್ರಿ ಶ್ರಮಿಸುತ್ತದೆ ಅಂಥವರು ನಾವಾಗಬೇಕು ಎಂದು ಹಿತವಚನ ನೀಡಿದರು ಮತ್ತು ಇಹ್ಸಾನ್ ವೇಲ್ಫೇರ್ ಟ್ರಸ್ಟ್ ನ ಕೆಲಸ ಕಾರ್ಯಗಳಿಗೆ ಶುಭ ಹಾರೈಸಿದರು.
ಪಂಜಿಮೊಗರು ವಾರ್ಡ್ ನ ಕಾರ್ಪೊರೇಟರಾದ ಅನಿಲ್ ಕುಮಾರ್ ಸರ್ ಮಾತಾನಾಡಿ ಇಹ್ಸಾನ್ ವೇಲ್ಫೇರ್ ಟ್ರಸ್ಟ್ ನ ಯುವಕರ ಸಾಮಾಜಿಕ ಸೇವೆಗಳನ್ನು ಪ್ರಶಂಶಿಸಿದರು.
ವೇದಿಕೆ ಮೇಲೆ ಕೂಳೂರು ಮುಹಿಯುದ್ದಿನ್ ಜುಮ್ಮಾ ಮಸ್ಜಿದ್ ಅಧ್ಯಕ್ಷರಾದ ಅಬ್ಬಾಸ್ ಹಾಜಿ, ಕೂಳೂರು ಕಾವೂರು ಮುಸ್ಲಿಂ ಒಕ್ಕೂಟ ಅಧ್ಯಕ್ಷರಾದ ಹುಸೈನ್ ರಿಯಾಜ್ ಮತ್ತು ಗೌರವ ಅಧ್ಯಕ್ಷರಾದ ಶೇಕುಂಜಿ ಹಾಜಿ ವೇದಿಕೆಯಲ್ಲಿ ಅಸಿನರಾಗಿದ್ದರು
ಕಾರ್ಯಕ್ರಮ ನಿರೂಪನೆಯನ್ನು ಟ್ರಸ್ಟ್ ನ ಜೊತೆ ಕಾರ್ಯದರ್ಶಿಯಾದ ಶಾರಿಕ್ ಪಂಜಿಮೊಗರು ನೆರವೇರಿಸಿ ಕೊಟ್ಟರು.