ಶಿಕ್ಷಣ ತಜ್ಞ ಸೌಂದರ್ಯ ಮಂಜಪ್ಪ, ಯುವ ಉದ್ಯಮಿ ಕೀರ್ತನ್ ಕುಮಾರ್ ಎಎಪಿ ಸೇರ್ಪಡೆ

Prasthutha|

ಬೆಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಶಿಕ್ಷಣ ತಜ್ಞ ಸೌಂದರ್ಯ ಮಂಜಪ್ಪ ಹಾಗೂ ಅವರ ಪುತ್ರ ಕೀರ್ತನ್ ಕುಮಾರ್ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಮಾಜಿ ಹಿರಿಯ ಐಪಿಎಸ್ ಅಧಿಕಾರಿ- ಪಕ್ಷದ ಉಪಾಧ್ಯಕ್ಷ  ಭಾಸ್ಕರ್ ರಾವ್ರವರ ಸಮ್ಮುಖದಲ್ಲಿ ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾದರು.

- Advertisement -

ಬೆಂಗಳೂರಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಸೌಂದರ್ಯ ಮಂಜಪ್ಪರವರು ಕೆಪಿಸಿಸಿ ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿದ್ದರು. ಸೌಂದರ್ಯ ಎಜುಕೇಷನಲ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ 500 ಮಂದಿಗೆ ಉದ್ಯೋಗ ನೀಡುತ್ತಿದ್ದಾರೆ. ಸೌಂದರ್ಯ ಮಂಜಪ್ಪನವರು ಹೋಟೆಲ್ ಉದ್ಯಮಿ ಕೂಡ ಹೌದು. ಅವರು ದಾಸರಹಳ್ಳಿ ಕ್ಷೇತ್ರದ ಸೌಂದರ್ಯ ನಗರ ನಿವಾಸಿಗಳ ಹಿತರಕ್ಷಣಾ ಸಂಘಟನೆಯ ಗೌರವಾಧ್ಯಕ್ಷರು, ಕರಾವಳಿ ಮಿತ್ರಮಂಡಳಿಯ ಮಾಜಿ ಅಧ್ಯಕ್ಷರು ಹಾಗೂ ಹಾವನೂರ್ ಎಕ್ಸ್ ಟೆನ್ಷನ್ ನ ಅಧ್ಯಕ್ಷರು.

ಸೌಂದರ್ಯ ಮಂಜಪ್ಪ ಹಾಗೂ ಅವರ ಮಗ ಕೀರ್ತನ್ ಕುಮಾರ್ರವರ ಪಕ್ಷ ಸೇರ್ಪಡೆಗೆ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಉಪಾಧ್ಯಕ್ಷ ಭಾಸ್ಕರ್ ರಾವ್, ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಹರ್ಷ ವ್ಯಕ್ತಪಡಿಸಿದರು.

Join Whatsapp