ಸಂಸತ್ ಅಧಿವೇಶನದಲ್ಲಿರುವಾಗಲೇ ಮಲ್ಲಿಕಾರ್ಜುನ ಖರ್ಗೆಗೆ ಇ.ಡಿ ಸಮನ್ಸ್

Prasthutha|

ನವದೆಹಲಿ: ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಂಸತ್ತಿನ ಅಧಿವೇಶನದಲ್ಲಿ ಭಾಗವಹಿಸಿರುವಾಗಲೇ ಜಾರಿ ನಿರ್ದೇಶನಾಲಯ (ಇಡಿ) ಅವರಿಗೆ ಸಮನ್ಸ್ ನೀಡಿದೆ.

- Advertisement -

“ನನಗೆ ಇಡಿ ಸಮನ್ಸ್ ಬಂದಿದೆ, ಅವರು ಮಧ್ಯಾಹ್ನ 12.30ಕ್ಕೆ ನನಗೆ ಕರೆ ಮಾಡಿದರು. ನಾನು ಕಾನೂನಿಗೆ ಬದ್ಧನಾಗಿರಲು ಬಯಸುತ್ತೇನೆ, ಆದರೆ ಸಂಸತ್ತು ಅಧಿವೇಶನದಲ್ಲಿದ್ದಾಗ ವಿಚಾರಣೆಗೆ ಕರೆಯುವುದು ಸರಿಯೇ? ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ನಿವಾಸಗಳಿಗೆ ಪೊಲೀಸರು ಘೇರಾವ್ ಹಾಕುವುದು ಸರಿಯೇ? ಎಂದು ಪ್ರಶ್ನಿಸಿದರು.

“ನಾವು ಹೆದರುವುದಿಲ್ಲ, ನಾವು ಹೋರಾಡುತ್ತೇವೆ” ಎಂದು ಖರ್ಗೆ ಹೇಳಿದರು.

- Advertisement -

ಇದು ಮೋದಿ ಆಡಳಿತದ ಕೀಳು ಮಟ್ಟದ ರಾಜಕೀಯವನ್ನು ತೋರಿಸುತ್ತದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಖರ್ಗೆಗೆ ಇಡಿ ಸಮನ್ಸ್ ನೀಡಿದೆ. ತೆರಿಗೆ ವಂಚನೆ ಆರೋಪದ ಮೇಲೆ ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಈಗಾಗಲೇ ಈ ಪ್ರಕರಣದಲ್ಲಿ ಪ್ರಶ್ನಿಸಲಾಗಿದೆ.



Join Whatsapp