ತಮಿಳು ಚಿತ್ರರಂಗದ ಮೇಲೆ ಇಡಿ ದಾಳಿ, 200 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ

Prasthutha|

ಚೆನ್ನೈ: ತಮಿಳುನಾಡಿನ ಚಲನಚಿತ್ರರಂಗದ ಮೇಲೆ ಇಡಿ ಕಣ್ಣು ಬಿದ್ದಿದ್ದು, ದಾಳಿ ನಡೆಸಿ 26 ಕೋಟಿ ನಗದು, 3 ಕೋಟಿ ಮೌಲ್ಯದ ಚಿನ್ನಾಭರಣ ಸೇರಿದಂತೆ 200 ಕೋಟಿ ರೂ.ಗಳ ಅಕ್ರಮ ಆಸ್ತಿಯನ್ನು ಪತ್ತೆಹಚ್ಚಿದೆ.

- Advertisement -

ಈ ಕುರಿತು ಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಿದ್ದು, ಚಿತ್ರ ನಿರ್ಮಾಪಕರು, ಹಂಚಿಕೆದಾರರು, ಹಣಕಾಸು ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗಿದೆ. ಚೆನ್ನೈ, ಮಧುರೈ, ಕೊಯಮತ್ತೂರು, ವೇಲೂರು ಸೇರಿದಂತೆ 40 ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ ಎಂದೂ ತಿಳಿಸಿದೆ.

ದಾಳಿ ವೇಳೆ ಕೆಲವು ದಾಖಲೆಗಳು, ಡಿಜಿಟಲ್ ಸಾಕ್ಷ್ಯಗಳು, ಲೆಕ್ಕಕ್ಕೆ ಸಿಗದ ನಗದು, ವ್ಯವಹಾರ, ಹೂಡಿಕೆಗಳು, ರಹಸ್ಯವಾಗಿ ಇಡಲಾದ ಹಣಕಾಸು ವಹಿವಾಟು ಪತ್ತೆಯಾಗಿವೆ.

- Advertisement -

ಸಿನಿಮಾ ಕ್ಷೇತ್ರದಲ್ಲಿರುವವರು ಪ್ರಾಮಿಸರಿ ನೋಟ್ಗಳು ಸೇರಿದಂತೆ ಕೆಲವು ದಾಖಲೆಗಳ ಮೇಲೆ ಅಕ್ರಮ ಹಣಕಾಸು ವಹಿವಾಟು ನಡೆಸಿದ್ದಾರೆ. ಅವುಗಳಿಂದ ಬಹಳಷ್ಟು ನಿರ್ಮಾಣ ಸಂಸ್ಥೆಗಳಿಗೆ ಮುಂಗಡವನ್ನು ನೀಡಲಾಗಿದ್ದಲ್ಲದೆ, ಸಿನಿಮಾ ಬಿಡುಗಡೆ ವೇಳೆ ಸಂಗ್ರಹಿಸಲಾದ ಆದಾಯವನ್ನು ಸಿಂಡಿಕೇಟ್ ರಚಿಸಿಕೊಂಡು ಮುಚ್ಚಿಡಲಾಗಿದೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ.

ಲೆಕ್ಕ ಪುಸ್ತಕದಲ್ಲಿರುವ ಮಾಹಿತಿಯೇ ಬೇರೆ. ಅಸಲಿಗೆ ಸಂಗ್ರಹವಾದ ಆದಾಯವೇ ಬೇರೆ. ಜತೆಗೆ ರಹಸ್ಯ ಹೂಡಿಕೆಗಳು ಕೂಡ ಪತ್ತೆಯಾಗಿವೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಆದಾಯ ತೆರಿಗೆ ಅಧಿಕಾರಿ ರೋಹಿಣಿ ದಿವಾಕರ್ ಮತ್ತು ಸಹೋದ್ಯೋಗಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.



Join Whatsapp