PFI ನಾಯಕರ ಮನೆ ಮೇಲೆ ಜಾರಿ ನಿರ್ದೇಶನಾಲಯ ತಂಡದ ದಾಳಿ

Prasthutha|

ತಿರುವನಂತಪುರಂ : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್ ಮೆನ್ ಒ.ಎಂ.ಎ. ಸಲಾಂ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ , ಕಾರ್ಯದರ್ಶಿ ನಸ್ರುದ್ದೀನ್ ಅವರ ಮನೆಯ ಮೇಲೆ ಇಂದು ಬೆಳಗ್ಗೆ ಜಾರಿ ನಿರ್ದೇಶನಾಲಯ(ED) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

- Advertisement -

ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿರುದ್ಧದ ರೈತರ ಹೋರಾಟದ ಗಮನ ಬೇರೆಡೆಗೆ ಸೆಳೆಯುವ ಉದ್ದೇಶದಿಂದ ಈ ದಾಳಿ ನಡೆದಿದೆ ಎಂದು ಸಂಘಟನೆಯ ಮುಖಂಡರು ಅಭಿಪ್ರಾಯ ಪಟ್ಟಿದ್ದಾರೆ.

ಕೇರಳದ ಕೆಲವು ರಾಷ್ಟ್ರೀಯ ನಾಯಕರು ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯವರ ಬೆಂಗಳೂರಿನಲ್ಲಿರುವ ಮನೆಯಲ್ಲಿ ಅಧಿಕಾರಿಗಳ ಶೋಧ ಕಾರ್ಯ ನಡೆದಿದೆ. ಆದರೆ, ದಾಳಿಗೆ ಖಚಿತ ಕಾರಣವನ್ನು ತಿಳಿಸಲಾಗಿಲ್ಲ. ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಕರಮನ ಅಶ್ರಫ್ ಮೌಲವಿ ಅವರ ಮನೆ ಮೇಲೂ ದಾಳಿ ನಡೆದಿದೆ.

- Advertisement -

“ಇದು ರೈತರ ವಿಚಾರವನ್ನು ವಿಷಯಾಂತರಿಸುವ ಮತ್ತು ಬಿಜೆಪಿ ಸರಕಾರದ ವೈಫಲ್ಯಗಳನ್ನು ಮರೆಮಾಚುವ ಹೀನ ಪ್ರಯತ್ನವಾಗಿದೆ. ಇದು ಸಾಂವಿಧಾನಿಕ ಸಂಸ್ಥೆಗಳನ್ನು ರಾಜಕೀಯ ಅಸ್ತ್ರಗಳಾಗಿ ಬಳಸುತ್ತಿರುವುದಕ್ಕೆ ಮತ್ತೊಂದು ನಿದರ್ಶನವಾಗಿದೆ. ಈ ರೀತಿಯ ಕಾರ್ಯಾಚರಣೆಗಳು ನಮ್ಮ ನ್ಯಾಯದ ಧ್ವನಿಗಳನ್ನು ತಡೆಯಲಾರವು ಅಥವಾ ಹಕ್ಕುಗಳಿಗಾಗಿರುವ ನಮ್ಮ ಪ್ರಜಾಸತ್ತಾತ್ಮಕ ಹೋರಾಟವನ್ನು ದುರ್ಬಲಗೊಳಿಸಲಾರವು’’ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಚೆಯರ್ ಮೆನ್ ಒ.ಎಂ.ಎ. ಸಲಾಂ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ಧಾರೆ.

ಅದೇ ರೀತಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್, “ಬಿಜೆಪಿ ಸರಕಾರವು ಬಗೆಹರಿಸಲಾರದ ಸಮಸ್ಯೆಯ ಸುಳಿಯಲ್ಲಿ ಸುತ್ತಿಕೊಂಡಿರುವಾಗ, ಅದು ಗಮನ ಬೇರೆಡೆ ಸೆಳೆಯಲು ಹೊಸ ವಿವಾದವನ್ನು ಸೃಷ್ಟಿಸುತ್ತಿದೆ. ಇದೀಗ ರೈತರ ವಿರೋಧವು ಸರಕಾರವನ್ನು ಪರಿಸ್ಥಿತಿ ಸ್ವೀಕರಿಸಿಕೊಳ್ಳುವ ಹಂತಕ್ಕೆ ತಂದು ನಿಲ್ಲಿಸಿದೆ. ಹೀಗಿರುವಾಗ, ಒಂದು ವೇಳೆ ಹೊಸ ವಿವಾದವೊಂದು ಸೃಷ್ಟಿಯಾದರೆ ಆಘಾತಕ್ಕೊಳಗಾಗಬೇಡಿ’’ ಎಂದು ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ.



Join Whatsapp