ವೆಬ್ ಪೋರ್ಟಲ್ ‘ನ್ಯೂಸ್ ಕ್ಲಿಕ್’ ಕಚೇರಿ, ಪ್ರವರ್ತಕರ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ

Prasthutha|

ನವದೆಹಲಿ : ಕಾನೂನು ಬಾಹಿರ ಹಣಕಾಸು ವ್ಯವಹಾರದ ಆರೋಪದ ಮೇರೆಗೆ ಇಂದು ದೆಹಲಿ ಮೂಲದ ನ್ಯೂಸ್ ಪೋರ್ಟಲ್ ಒಂದರ ಕಚೇರಿ ಹಾಗೂ ಅದರ ಪ್ರವರ್ತಕರಿಗೆ ಸೇರಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡಿದೆ ಎಂದು ವರದಿಗಳು ತಿಳಿಸಿವೆ.

- Advertisement -

ದಕ್ಷಿಣ ದೆಹಲಿ ಸಯೀದುಲ್ಲಾಜಬ್ ನಲ್ಲಿರುವ ‘ನ್ಯೂಸ್ ಕ್ಲಿಕ್’ ಆನ್ ಲೈನ್ ಸುದ್ದಿ ವಾಹಿನಿಯ ಕಚೇರಿ ಮತ್ತು ಅದರ ಪ್ರವರ್ತಕರಿಗೆ ಸೇರಿದ ಸ್ಥಳಗಳ ಮೇಲೆ ಈಡಿ ದಾಳಿ ನಡೆದಿದೆ.

ಸುದ್ದಿ ಸಂಸ್ಥೆಯು ನಡೆಸಿರುವ ಅಕ್ರಮ ಹಣಕಾಸು ವ್ಯವಹಾರಗಳ ಕುರಿತು ಹೆಚ್ಚಿನ ತನಿಖೆ ನಡೆಸುವ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಕೆಲವು ವಿದೇಶಿ ದೇಣಿಗೆ ವ್ಯವಹಾರದ ಕುರಿತು ಪರಿಶೀಲನೆ ನಡೆಸಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Join Whatsapp