ಭಾರಿ ಭದ್ರತೆಯೊಂದಿಗೆ ಶಹಜಹಾನ್ ಶೇಖ್ ಮನೆ ಮೇಲೆ ಇಡಿ ದಾಳಿ

Prasthutha|

ಪಶ್ಚಿಮ ಬಂಗಾಳ: ಪಡಿತರ ಹಗರಣ ಸಂಬಂಧದ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕ ಶಹಜಹಾನ್ ಶೇಖ್ ಅವರ ಮನೆಗೆ ಜಾರಿ ನಿರ್ದೇಶನಾಲಯ ತಂಡ ಮತ್ತೊಮ್ಮೆ ದಾಳಿ ನಡೆಸಿದ್ದು, ಈ ಸಂದರ್ಭ ಭಾರಿ ಭದ್ರತೆ ಇಡಿ ಮಾಡಿಕೊಂಡಿತ್ತು.

- Advertisement -

ಈ ಹಿಂದೆ ಜನವರಿ 5 ರಂದು ಇಡಿ ತಂಡವು ಶಹಜಹಾನ್ ಶೇಖ್ ಮನೆಯ ಮೇಲೆ ದಾಳಿ ನಡೆಸಿದ ಸಂದರ್ಭ ಶಹಜಹಾನ್ ಶೇಖ್ ಅವರ ಆಪ್ತರು ಸೇರಿ ಗುಂಪು ದಾಳಿ ನಡೆಸಿದ್ದರು. ಅದಕ್ಕಾಗಿ ಇದೀಗ ಸ್ಥಳೀಯ ಪೋಲೀಸರ ಜೊತೆ ಕೇಂದ್ರ ಭದ್ರತಾ ಪಡೆ ಸಿಬ್ಬಂದಿ ಸೇರಿದಂತೆ ಒಟ್ಟು ಇಪ್ಪತ್ತನಾಲ್ಕು ವಾಹನಗಳಲ್ಲಿ ಅಧಿಕಾರಿಗಳು ಬಂದಿಳಿದಿದ್ದಾರೆ. ನಿವಾಸಕ್ಕೆ ಪ್ರವೇಶಿಸಿದ ಇಡಿ ಅಗತ್ಯ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದೆ.

ಶಹಜಹಾನ್ ಶೇಖ್ ಉತ್ತರ 24 ಪರಗಣ ಜಿಲ್ಲಾ ಕೌನ್ಸಿಲ್‌ನ ಸದಸ್ಯರೂ ಆಗಿದ್ದಾರೆ. ಪಶ್ಚಿಮ ಬಂಗಾಳದ ಎಡಪಂಥೀಯ ಸರ್ಕಾರದ ಅವಧಿಯಲ್ಲಿ ಶೇಖ್ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ನಂತರ ಅವರು 2009-2010 ರ ಸುಮಾರಿಗೆ ಟಿಎಂಸಿ ನಾಯಕ ಜ್ಯೋತಿಪ್ರಿಯೊ ಮಲ್ಲಿಕ್ ಅವರ ಸಹಾಯದಿಂದ ತೃಣಮೂಲ ಕಾಂಗ್ರೆಸ್‌ಗೆ ಸೇರಿದರು. ಶೇಖ್ ಹಲವಾರು ಬಾರಿ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿ ಸ್ಥಳೀಯ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದರು.

- Advertisement -

ಶಹಜಹಾನ್ ಶೇಖ್ 2022 ರಲ್ಲಿ ಕಳೆದ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದರು ಮತ್ತು ಉತ್ತರ 24 ಪರಗಣ ಜಿಲ್ಲೆಯ ಜಿಲ್ಲಾ ಪರಿಷತ್ ಸದಸ್ಯರಾಗಿ 34,000 ಕ್ಕೂ ಹೆಚ್ಚು ಮತಗಳಿಂದ ಆಯ್ಕೆಯಾಗಿದ್ದಾರೆ.



Join Whatsapp