ಬೀಜಿಂಗ್: ನೇರುತ್ಯ ಚೀನದ ಝಾವೊಟಾಂಗ್ ಪ್ರಾಂತ್ಯದ ಲಿಯಾಂಗ್‌ಶುಯಿ ಹಳ್ಳಿಯಲ್ಲಿ ಸಂಭವಿಸಿದ್ದ ಭೂಕಂಪದಲ್ಲಿ ಮೃತರ ಸಂಖ್ಯೆ 20ಕ್ಕೇರಿದೆ. ಸೋಮವಾರ ಸಂಭವಿಸಿದ್ದ ಭೂಕಂಪದಲ್ಲಿ ಒಟ್ಟು 47 ಮಂದಿ ಸಿಲುಕಿದ್ದರು. ಈ ಪೈಕಿ 20 ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ. 24 ಮಂದಿ ನಾಪತ್ತೆಯಾಗಿದ್ದಾರೆ.
ಮಂಗಳವಾರ ಪಶ್ಚಿಮ ಚೀನದಲ್ಲಿ 7.1 ತೀವ್ರತೆಯ ಭೂಕಂಪನ ಸಂಭವಿಸಿದೆ. ಕ್ಷಿನ್‌ಜಿಯಾಂಗ್ ಪ್ರದೇಶದ ಉಚು¤ರ್ಪನ್‌ನಲ್ಲಿರುವ ಅಕ್ಸು ಎಂಬಲ್ಲಿ ಮಂಗಳವಾರ ಮುಂಜಾನೆ 2 ಗಂಟೆಗೆ (ಸೋಮವಾರ ತಡರಾತ್ರಿ) ಸಂಭವಿಸಿದ ಕಂಪನದಿಂದ 6 ಮಂದಿ ಗಾಯಗೊಂಡಿದ್ದಾರೆ. 47 ಮನೆಗಳು ಕುಸಿದಿವೆ. ಇನ್ನು 78 ಮನೆಗಳು ಹಾನಿಗೀಡಾಗಿವೆ.