ಶಬೀರ್ ಅಹ್ಮದ್ ಶಾರ ಮನೆ ಮುಟ್ಟುಗೋಲು ಹಾಕಿಕೊಂಡ ಇ.ಡಿ.

Prasthutha|

ನವದೆಹಲಿ: 2002ರ ಹಣ ಅಕ್ರಮ ವರ್ಗಾವಣೆ ಕಾಯ್ದೆಯಡಿ ಕಾಶ್ಮೀರದ ಹುರಿಯತ್ ನಾಯಕ ಶಬೀರ್ ಅಹ್ಮದ್ ಶಾ ಅವರ ಮನೆಯನ್ನುಇಡಿ- ಜಾರಿ ನಿರ್ದೇಶನಾಲಯ ಇಂದು ಮುಟ್ಟುಗೋಲು ಹಾಕಿಕೊಂಡಿದೆ.

- Advertisement -

 ಶ್ರೀನಗರದ ಸನತ್ ನಗರದ ಬೋಟ್ಶಾ ಕಾಲೋನಿಯಲ್ಲಿನ ಮನೆಯು ಗುಲಾಂ ಮುಹಮ್ಮದ್ ಅವರ ಮಗ ಶಬೀರ್ ಅಹ್ಮದ್ ಶಾ ಅವರಿಗೆ ಸೇರಿದ್ದಾಗಿದೆ. ಅದನ್ನು 2002 ಪಿಎಂಎಲ್ ಎ- ಹಣ ಅಕ್ರಮ ವರ್ಗಾವಣೆ ತಡೆ ಮಸೂದೆಯಡಿ ಮುಟ್ಟುಗೋಲು ಹಾಕಿಕೊಂಡುದಾಗಿ ಜಾರಿ ನಿರ್ದೇಶನಾಲಯ ಹೇಳಿದೆ.

2017ರ ಮೇ 30ರಂದು ಹಫೀಝ್ ಮುಹ್ಮದ್ ಸಯೀದ್ ವಿರುದ್ಧ ದಾಖಲಿಸಿದ ಎಫ್ ಐಆರ್ ಆಧಾರದಲ್ಲಿ ವಿವಿಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಗಳಡಿ ಹಾಗೂ ಯುಎಪಿಎ- ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ ಇ.ಡಿ. ನಾನಾ ಹಣ ಅಕ್ರಮ ವರ್ಗಾವಣೆ ದೂರುಗಳ ಬಗ್ಗೆ ತನಿಖೆ ಆರಂಭಿಸಿದ್ದಾಗಿ ತಿಳಿಸಿದೆ.

- Advertisement -

“ಇಂತಹ ತನಿಖೆಯ ವೇಳೆ ಕಾಶ್ಮೀರದಲ್ಲಿ ಕಲ್ಲು ತೂರಾಟ, ಪ್ರತಿಭಟನೆ, ಮೆರವಣಿಗೆ, ಹರತಾಳ ಮೊದಲಾದವುಗಳಲ್ಲಿ ಶಬೀರ್ ಅಹ್ಮದ್ ಶಾ ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿಕೊಂಡಿದ್ದು ಕಂಡು ಬಂದಿದೆ” ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

ಪಾಕಿಸ್ತಾನದಲ್ಲಿ ನೆಲೆ ಹೊಂದಿರುವ ಹಿಜ್ಬುಲ್ ಮುಜಾಹಿದ್ದೀನ್ ಮೊದಲಾದ ಸಂಸ್ಥೆಗಳಿಂದ ಶಬೀರ್ ಅಹ್ಮದ್ ಶಾ ಹಣ ಪಡೆದು ಕಣಿವೆಯಲ್ಲಿ ಗಲಭೆಗಳಿಗೆ ಕಾರಣರಾಗಿದ್ದರು ಎಂದು ಇಡಿ ಹೇಳಿದೆ.

ಈ ತನಿಖೆ ವೇಳೆ ಶಬೀರ್ ಅಹ್ಮದ್ ಶಾ 21.80 ಲಕ್ಷ ಮೌಲ್ಯದ ಆಸ್ತಿ ಹೊಂದಿರುವುದು ಕಂಡು ಬಂದಿದ್ದು, ಅದನ್ನು ಪಿಎಂಎಲ್ಎ ಕಾಯ್ದೆಯಡಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇಡಿ ವಿವರಿಸಿದೆ.



Join Whatsapp