ವಾಯು ಮಾಲಿನ್ಯ: ದೆಹಲಿ, ಉ.ಪ್ರ, ಪಂಜಾಬ್, ಹರ್ಯಾಣ ಸರಕಾರಕ್ಕೆ ಸಮನ್ಸ್ ನೀಡಿದ NHRC

Prasthutha|

ನವದೆಹಲಿ: ದೆಹಲಿಯ ಎನ್.ಸಿ.ಆರ್’ನಲ್ಲಿ ವಾಯು ಮಾಲಿನ್ಯದ ಹೆಚ್ಚಳದ ಬಗ್ಗೆ ಎಚ್ಚೆತ್ತ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC), ಈ ವಿಚಾರದಲ್ಲಿ ಚರ್ಚಿಸಲು ನವೆಂಬರ್ 10ರಂದು ತನ್ನ ಮುಂದೆ ವಿಚಾರಣೆಗೆ ಬರುವಂತೆ ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ ಮತ್ತು ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಮನ್ಸ್ ಜಾರಿಗೊಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

- Advertisement -

ಶುಕ್ರವಾರ ಬೆಳಗ್ಗೆ 9.30ಕ್ಕೆ ದೆಹಲಿಯಲ್ಲಿ ವಾಯುವಿನ ಗುಣಮಟ್ಟ ಸೂಚ್ಯಂಕ 426 ತೀವ್ರತೆಯಿತ್ತು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅಂಕಿಅಂಶಗಳು ಬಹಿರಂಗಪಡಿಸಿವೆ.

ವಾಯುಮಾಲಿನ್ಯ ಸಮಸ್ಯೆಯನ್ನು ಪರಿಹರಿಸಲು ಇದುವರೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ತೃಪ್ತವಾಗಿಲ್ಲ ಮತ್ತು ದೆಹಲಿಯಲ್ಲಿ ಮಾಲಿನ್ಯವನ್ನು ಕಡಿಮೆ ಮಾಡಲು ಹೆಚ್ಚಿನ ಕೆಲಸಕಾರ್ಯಗಳನ್ನು ಮಾಡುವ ಅಗತ್ಯವಿದೆ ಎಂದು ಎನ್.ಎಚ್.ಆರ್.ಸಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

- Advertisement -

ಹೂಳು ಸುಡುವುದನ್ನು ತಡೆಯಲು ಆಯಾ ಸರ್ಕಾರಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಒಂದು ವಾರದೊಳಗೆ ಪ್ರತಿಕ್ರಿಯಿಸುವಂತೆ ಮಾನವ ಹಕ್ಕುಗಳ ಸಮಿತಿ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದೆ.

ಭಾರತದಲ್ಲಿ ವಾಯುಮಾಲಿನ್ಯವು ಮಾನವನ ಆರೋಗ್ಯಕ್ಕೆ ದೊಡ್ಡ ಅಪಾಯಕಾರಿಯಾಗಿದೆ ಮತ್ತು ದೆಹಲಿ ಜನರ ಜೀವಿತಾವಧಿಯನ್ನು ಕಡಿಮೆ ಮಾಡಬಹುದು ಎಂಬ ಮಾಧ್ಯಮಗಳ ವರದಿಗಳನ್ನು ಸ್ವಯಂಪ್ರೇರಿತವಾಗಿ ಸ್ವೀಕರಿಸಿ ಸರಕಾರಗಳಿಗೆ ಸಮನ್ಸ್ ನೀಡಲಾಗಿದೆ ಎಂದು NHRC ತಿಳಿಸಿದೆ.

“ಸುಪ್ರೀಂ ಕೋರ್ಟ್, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮತ್ತು ಇತರ ಅಧಿಕಾರಿಗಳ ಹಲವಾರು ನಿರ್ದೇಶನಗಳ ಹೊರತಾಗಿಯೂ ದೆಹಲಿ-ಎನ್‌ಸಿಆರ್‌ನಲ್ಲಿನ ಗಾಳಿಯ ಗುಣಮಟ್ಟವು ಸುಧಾರಣೆಯನ್ನು ಕಂಡಿಲ್ಲ” ಎಂದು NHRC ಹೇಳಿದೆ.

Join Whatsapp