ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಪತ್ನಿಯ ಆಸ್ತಿ ಮುಟ್ಟುಗೋಲು ಹಾಕಿದ ಇ.ಡಿ.!

Prasthutha|

ನವದೆಹಲಿ: ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅವರ ಪತ್ನಿ ನಳಿನಿ ಚಿದಂಬರಂ, ಸಿಪಿಎಂ ಮಾಜಿ ಶಾಸಕ ದೇಬೇಂದ್ರನಾಥ್ ಬಿಸ್ವಾಸ್ ಮತ್ತು ಅಸ್ಸಾಂನ ಮಾಜಿ ಸಚಿವ ದಿವಂಗತ ಅಂಜನ್ ದತ್ತಾ ಒಡೆತನದ ಕಂಪನಿಯಂತಹ ಫಲಾನುಭವಿಗಳಿಗೆ ಸೇರಿದ 6 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

- Advertisement -

ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ 3.3 ಕೋಟಿ ರೂ.ಗಳ ಚರಾಸ್ತಿ ಮತ್ತು 3 ಕೋಟಿ ರೂ.ಗಳ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ತಾತ್ಕಾಲಿಕ ಆದೇಶ ಹೊರಡಿಸಲಾಗಿದೆ ಎಂದು ಫೆಡರಲ್ ಏಜೆನ್ಸಿ ಹೇಳಿಕೆಯಲ್ಲಿ ತಿಳಿಸಿದೆ.ಈ ಆಸ್ತಿಗಳು ಶಾರದಾ ಗ್ರೂಪ್ ಮತ್ತು ಇತರ ಜನರ ಒಡೆತನದಲ್ಲಿದ್ದು, ಗುಂಪು ಸೃಷ್ಟಿಸಿದ “ಅಪರಾಧದ ಆದಾಯ”ದ ಫಲಾನುಭವಿಗಳಾಗಿದ್ದರು ಎಂದು ಅದು ಹೇಳಿದೆ.

ನಳಿನಿ ಚಿದಂಬರಂ, ದೇಬಬ್ರತಾ ಸರ್ಕಾರ್ (ಈಸ್ಟ್ ಬೆಂಗಾಲ್ ಕ್ಲಬ್ ಅಧಿಕಾರಿ), ದೇಬೇಂದ್ರನಾಥ್ ಬಿಸ್ವಾಸ್ (ಮಾಜಿ ಐಪಿಎಸ್ ಅಧಿಕಾರಿ ಮತ್ತು ಮಾಜಿ ಸಿಪಿಎಂ ಶಾಸಕ) ಮತ್ತು ಕಾಂಗ್ರೆಸ್ ನ ಅಸ್ಸಾಂ ಘಟಕದ ಅಧ್ಯಕ್ಷರಾಗಿದ್ದ ದತ್ತಾ ಒಡೆತನದ ಅನುಭೂತಿ ಪ್ರಿಂಟರ್ಸ್ ಅಂಡ್ ಪಬ್ಲಿಕೇಷನ್ಸ್ ಫಲಾನುಭವಿಗಳಲ್ಲಿ ಸೇರಿದ್ದಾರೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

Join Whatsapp