ನವದೆಹಲಿ: ಜಾರಿ ನಿರ್ದೇಶನಾಲಯ-ಇಡಿ ಅಧಿಕಾರಿಗಳು ವೈ ಎಸ್ ಆರ್ ಕಾಂಗ್ರೆಸ್ ಸಂಸದ ಮಾಗುಂಟ ಶ್ರೀನಿವಾಸಲು ರೆಡ್ಡಿಯವರ ಪುತ್ರ ರಾಘವ ಮಾಗುಂಟರನ್ನು ಶನಿವಾರ ಬಂಧಿಸಿದ್ದಾರೆ.
ದಿಲ್ಲಿ ಅಬಕಾರಿ ನೀತಿಯಲ್ಲಿ ಅಕ್ರಮ ಹಣ ವರ್ಗಾವಣೆ ಸಂಬಂಧ ಈ ಬಂಧನ ನಡೆದಿದೆ ಎಂದು ವರದಿಯಾಗಿದೆ. ಪಿಎಂಎಲ್’ಎ- ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ ರಾಘವ ಮಾಗುಂಟ ಬಂಧನ ನಡೆದಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಇಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಕೇಂದ್ರೀಯ ತನಿಖಾ ದಳವು ತನ್ನ ವಶಕ್ಕೆ ಪಡೆಯಲಿದೆ ಎಂದು ಹೇಳಲಾಗಿದೆ.ಈ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಇಲ್ಲಿಯವರೆಗೆ ಈ ವಾರದ ಮೂವರನ್ನು ಸೇರಿಸಿ ಒಂಬತ್ತು ಜನರನ್ನು ಬಂಧಿಸಿದೆ.
ಈ ವಾರದ ಆರಂಭದಲ್ಲಿ ಪಂಜಾಬಿನ ಶಿರೋಮಣಿ ಅಕಾಲಿ ದಳದ ಮಾಜಿ ಶಾಸಕ ದೀಪ್ ಮಲ್ಹೋತ್ರಾ ಅವರ ಪುತ್ರ ಗೌತಂ ಮಲ್ಹೋತ್ರಾರನ್ನು ಬಂಧಿಸಿದ್ದರು. ಆಮೇಲೆ ಚಾರಿಯೆಟ್ ಪ್ರೊಡಕ್ಷನ್ಸ್ ಮೇಡಿಯಾ ಪ್ರೈ. ಲಿ. ಎಂಬ ಜಾಹೀರಾತು ಕಂಪೆನಿಯ ರಾಜೇಶ್ ಜೋಶಿ ಎನ್ನುವವರನ್ನು ಬಂಧಿಸಿದ್ದರು.
ಆಮ್ ಆದ್ಮಿ ಪಕ್ಷದ ಸಂವಹನ ಮುಖ್ಯಸ್ಥ ವಿಜಯ್ ನಯ್ಯರ್ ಅವರು ದಿಲ್ಲಿ ಅಬಕಾರಿ ಹೊಸ ನೀತಿ ಜಾರಿಗಾಗಿ ರೂ. 100 ಕೋಟಿ ಒಳ ಹಣ ಪಡೆದಿದ್ದಾರೆ ಎಂದು ಜಾರಿ ನಿರ್ದೇಶನಾಲಯದವರು ಆರೋಪ ಮಾಡಿದ್ದಾರೆ. ಮಾಗುಂಟ, ಶರತ್ ರೆಡ್ಡಿ, ತೆಲಂಗಾಣ ಮುಖ್ಯಮಂತ್ರಿ ಕಲವಕುಂಟ್ಲ ಕವಿತಾ ಮಾಲಕತ್ವದ ಸೌತ್ ಗ್ರೂಪ್ ನಿಂದ ಈ ಲಂಚ ಪಡೆಯಲಾಗಿದೆ ಎಂದು ಇಡಿ ಆರೋಪ ಮಾಡಿದೆ.
ದಿಲ್ಲಿ ಅಬಕಾರಿ ನೀತಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಸಿಬಿಐ- ಕೇಂದ್ರೀಯ ತನಿಖಾ ದಳದವರು ಈ ಮೊದಲೇ ಸಿಎ ಆಗಿರುವ ಕವಿತಾರನ್ನು ಬಂಧಿಸಿದ್ದಾರೆ.
“ದಿಲ್ಲಿ ಹೊಸ ಅಬಕಾರಿ ನೀತಿಯಲ್ಲಿ ಸಗಟು ವ್ಯವಹಾರದಲ್ಲಿ ಹೈದರಾಬಾದಿನ ಸೌತ್ ಗ್ರೂಪಿಗೆ ಅನುಕೂಲವಾಗುವಂತೆ ಹಣ ವರ್ಗಾವಣೆಯ ಪಾತ್ರ ನಿರ್ವಹಿಸುವಲ್ಲಿ ಮುಖ್ಯರು ಎನ್ನಲಾದ ಹೈದರಾಬಾದಿನ ಸಿಎ ಬುಚ್ಚಿಬಾಬು ಗೋರಂಟ್ಲ ಎನ್ನುವವರನ್ನು ತನಿಖೆ ನಡೆಸಿ ಬಂಧಿಸಲಾಗಿದೆ. 2021-22ರ ಹೊಸ ಅಬಕಾರಿ ನೀತಿಯನ್ನು ಅಕ್ರಮ ಹಣ ವರ್ಗಾವಣೆಗಾಗಿಯೇ ಮಾಡಲಾಗಿದೆ. ಗೋರಂಟ್ಲರನ್ನು ಇಂದು ಶನಿವಾರ ಕೋರ್ಟಿನಲ್ಲಿ ನಿಲ್ಲಿಸಲಾಗುತ್ತದೆ.” ಎಂದು ಸಿಬಿಐ ವಕ್ತಾರ ಆರ್. ಸಿ. ಜೋಶಿ ಹೇಳಿದರು.