ಸಂಚಾರ ಉಲ್ಲಂಘನೆ ಶೇ. 50 ರಿಯಾಯಿತಿ ವಿಸ್ತರಣೆಗೆ ಮನವಿ: 9 ದಿನಗಳಲ್ಲಿ 100 ಕೋಟಿ ದಂಡ ಸಂಗ್ರಹ

Prasthutha|

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಯ ದಂಡ ಪಾವತಿಗೆ ಶೇ. 50 ರಿಯಾಯಿತಿಯ ಅವಕಾಶವನ್ನು ಇನ್ನೂ ಕೆಲ ದಿನಗಳ ಕಾಲ ವಿಸ್ತರಿಸುವಂತೆ ಮೌಖಿಕವಾಗಿ ಸಂಚಾರ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಗಳು ವಿನಂತಿಸಿದ್ದಾರೆ.

- Advertisement -


ರಿಯಾಯಿತಿಯ ದಂಡಪಾವತಿಗೆ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಅವಧಿ ವಿಸ್ತರಣೆಯ ಸಂಚಾರ ವಿಭಾಗದ ಅಧಿಕಾರಿಗಳ ಮೌಖಿಕ ವಿನಂತಿಗೆ ಇನ್ನೂ ಯಾವುದೇ ರೀತಿಯ ಒಪ್ಪಿಗೆ ದೊರೆತಿಲ್ಲ.


ದಂಡ ಪಾವತಿಗೆ ದಿನಾಂಕ ವಿಸ್ತರಣೆ ಮಾಡುವಂತೆ ಒತ್ತಾಯವೂ ಕೇಳಿ ಬರುತ್ತಿದ್ದು, ಅವಧಿ ವಿಸ್ತರಣೆ ಬಗ್ಗೆ ಮೌಖಿಕವಾಗಿ ವಿನಂತಿಸಲಾಗಿದ್ದು ಇನ್ನೂ ಯಾವುದೇ ನಿರ್ಧಾರ ಮಾಡಲಾಗಿಲ್ಲ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್ .ಅನುಚೇತ್ ತಿಳಿಸಿದ್ದಾರೆ.

- Advertisement -


ಈ ನಡುವೆ ಶೇ. 50 ರಿಯಾಯಿತಿಯ ದಂಡ ಪಾವತಿಯ ಕೊನೆಯ ದಿನವಾದ ಇಂದು ವಾಹನ ಚಾಲಕರು ದಂಡ ಪಾವತಿ ಮಾಡಲು ಮುಗಿಬಿದ್ದಿದ್ದಾರೆ ಇದರಿಂದ ಇಂದು 20 ಕೋಟಿಗೂ ಹೆಚ್ಚು ದಂಡ ಸಂಗ್ರಹವಾಗುವ ನಿರೀಕ್ಷೆಯಿದೆ.


ರಿಯಾಯಿತಿಯ ಲಾಭ ಪಡೆದ ವಾಹನಗಳ ಮಾಲೀಕರು 9 ದಿನಗಳಿಂದ 100 ಕೋಟಿ ವರೆಗೆ ದಂಡ ಪಾವತಿಸಿದ್ದಾರೆ. ನಿನ್ನೆ ದಾಖಲೆ ಪ್ರಮಾಣದ 17.61ಕೋಟಿ ದಂಡ ಸಂಗ್ರಹ ಮಾಡಲಾಗಿದೆ. ವಾಹನಗಳ ಸಂಚಾರ ನಿಯಮ ಉಲ್ಲಂಘನೆಯ ಸಂಬಂಧ ಇಲ್ಲಿಯವರೆಗೆ 100 ಕೋಟಿಗೂ ಹೆಚ್ಚು ದಂಡ ಸಂಗ್ರಹ ವಾಗುವ ಸಾಧ್ಯತೆಗಳಿವೆ.ನಿನ್ನೆಒಟ್ಟಾರೆ 31,11,546 ಪ್ರಕರಣಗಳು ಇತ್ಯರ್ಥಗೊಂಡು 85.83,07,541 ರೂಗಳ ದಂಡ ಸಂಗ್ರಹವಾಗಿತ್ತು.


ಕಳೆದ ಫೆ.8ರಂದು 9,06,94,800 ರೂ ನಿನ್ನೆ 12,36,35,450 ರೂ,ನಿನ್ನೆ ರಾತ್ರಿ 8ರವರೆಗೆ ದಾಖಲೆ ಪ್ರಮಾಣದ 85.83,07,541 ರೂಗಳ ದಂಡ ಸಂಗ್ರಹವಾಗಿದೆ ಎಂದು ಎಂ.ಎನ್.ಅನುಚೇತ್ ತಿಳಿಸಿದ್ದಾರೆ.


ದಂಡ ಪಾವತಿಗೆ ಇಂದು ವಾಹನಗಳ ಮಾಲೀಕರು ಮುಗಿಬಿದ್ದಿದ್ದಾರೆ. ನಗರದ ಸಂಚಾರ ಪೊಲೀಸ್ ಠಾಣೆಗಳು ಮಾತ್ರವಲ್ಲದೆ, ಇನ್ಫಾಂಟ್ರಿ ರಸ್ತೆಯಲ್ಲಿರುವ ಸಂಚಾರ ನಿರ್ವಹಣಾ ಕೇಂದ್ರ(ಟಿಎಂಸಿ)ದಲ್ಲಿ ಕೌಂಟರ್ ಗಳಲ್ಲಿ ದಂಡ ಪಾವತಿಗೆ ಭಾರೀ ಪ್ರಮಾಣದ ಜನಸಂದಣಿ ಉಂಟಾಗಿದೆ.

Join Whatsapp