18 ವಿರೋಧ ಪಕ್ಷಗಳ ನಾಯಕರಿಂದ ಇ.ಡಿ. ಕಚೇರಿ ಚಲೋ: ಮಾರ್ಗಮಧ್ಯೆ ತಡೆದ ಪೊಲೀಸರು

Prasthutha|

ನವದೆಹಲಿ: ಅದಾನಿ ವಿವಾದದ ಬಗ್ಗೆ ತನಿಖೆಗೆ ಒತ್ತಾಯಿಸಿ 18 ವಿರೋಧ ಪಕ್ಷಗಳ ನಾಯಕರು ಇ.ಡಿ.ಕಚೇರಿಗೆ ಮುತ್ತಿಗೆ ಹಾಕಲು ಮೆರವಣಿಗೆಯಲ್ಲಿ ತೆರಳುತ್ತಿದ್ದಾಗ ದೆಹಲಿ ಪೊಲೀಸರು ಮಾರ್ಗ ಮಧ್ಯೆ ಅವರೆಲ್ಲರನ್ನು ತಡೆದರು.

- Advertisement -

ಅದಾನಿ-ಹಿಂಡನ್ ಬರ್ಗ್ ವಿವಾದದ ಬಗ್ಗೆ ತನಿಖೆ ನಡೆಸಬೇಕು ಮತ್ತು ಆಡಳಿತಾರೂಢ ಬಿಜೆಪಿ ರಾಜಕೀಯ ಉದ್ದೇಶಗಳಿಗಾಗಿ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ವಿರೋಧ ಪಕ್ಷದ ನಾಯಕರು ದೆಹಲಿಯ ಜಾರಿ ನಿರ್ದೇಶನಾಲಯದ (ಇಡಿ) ಕಚೇರಿಗೆ ಮೆರವಣಿಗೆ ನಡೆಸಲು ಯತ್ನಿಸಿದರು. 

ಮೆರವಣಿಗೆಗೆ ಮುಂಚಿತವಾಗಿ, ಪ್ರತಿಭಟನಾನಿರತ ನಾಯಕರು ಇಡಿ ಕಚೇರಿಗೆ ಹೋಗುವುದನ್ನು ತಡೆಯಲು ದೆಹಲಿ ಪೊಲೀಸರು ಬ್ಯಾರಿಕೇಡ್’ಗಳನ್ನು ಹಾಕಿದ್ದರು ಮತ್ತು ಭಾರೀ ಸಂಖ್ಯೆಯಲ್ಲಿ ಪೊಲೀಸ್ ತುಕಡಿಯನ್ನು ನಿಯೋಜಿಸಿದ್ದರು.

- Advertisement -

ಮಾರ್ಗ ಮಧ್ಯೆ ಪೊಲೀಸರು ವಿರೋಧ ಪಕ್ಷದ ನಾಯಕರನ್ನು ತಡೆದರು. ಆಗ ಅನಿವಾರ್ಯವಾಗಿ ಮೆರವಣಿಗೆಯನ್ನು ನಿಲ್ಲಿಸಿ ಸಂಸತ್ತಿಗೆ ಮರಳಿದ ಮುಖಂಡರು, ನಾವು ಇ.ಡಿ.ಯೊಂದಿಗೆ ಅಪಾಯಿಂಟ್ಮೆಂಟ್ ಕೇಳಿದ್ದೇವೆ, ಶೀಘ್ರದಲ್ಲೇ ಜಂಟಿ ದೂರು ಪತ್ರವನ್ನು ಬಿಡುಗಡೆ ಮಾಡುವುದಾಗಿ ಅವರು ಹೇಳಿದರು.

“ಅವರು ನಮ್ಮನ್ನು ಇಲ್ಲಿ ತಡೆದಿದ್ದಾರೆ. ನಾವು 200 ಜನರಿದ್ದೇವೆ, ಮತ್ತು ಕನಿಷ್ಠ 2,000 ಪೊಲೀಸ್ ಸಿಬ್ಬಂದಿ ನಮ್ಮನ್ನು ತಡೆದಿದ್ದಾರೆ. ಅವರು ನಮ್ಮ ಧ್ವನಿಯನ್ನು ನಿಗ್ರಹಿಸಲು ಬಯಸುತ್ತಿದ್ದಾರೆ. ತದನಂತರ ಅವರು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.



Join Whatsapp