ಉಳ್ಳಾಲ: SDPI ನಗರ ಸಮಿತಿ ಮಹಿಳಾ ಕಾರ್ಯಕರ್ತೆಯರ ಸಮ್ಮಿಲನ, ಪಕ್ಷ ಸೇರ್ಪಡೆ ಕಾರ್ಯಕ್ರಮ

Prasthutha|

ಉಳ್ಳಾಲ: SDPI ಉಳ್ಳಾಲ ನಗರ ಸಮಿತಿಯ ವತಿಯಿಂದ ಮಹಿಳಾ ಕಾರ್ಯಕರ್ತೆಯರ ಸಮ್ಮಿಲನ SDPI ಉಳ್ಳಾಲ ಕಚೇರಿಯಲ್ಲಿ ನಡೆಯಿತು.

- Advertisement -


SDPI ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷೆ ಮಿಸ್ರಿಯಾ ಕಣ್ಣೂರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಮಹಿಳೆಯು ಸಮಾಜದ ಎಲ್ಲಾ ಕ್ಷೇತ್ರದಲ್ಲಿಯೂ ಸಮರ್ಥವಾಗಿ ಕಾರ್ಯನಿರ್ವಹಿಸಬಲ್ಲಳು ಎಂಬುದು ಈಗಾಗಲೇ ಸಾಬೀತಾಗಿದೆ. ಮದರ್ ತೆರೆಸಾ, ಮೇಡಮ್ ಕ್ಯೂರಿ, ಕಲ್ಪನಾ ಚಾವ್ಲಾ, ಇಂದಿರಾಗಾಂಧಿ, ಡ್ರಿಫ್ಟ್ ಕ್ವಿನ್ ರಿಫಾ ತಸ್ಕೀನ್ ಮುಂತಾದ ಸಾಧಕ ಮಹಿಳೆಯರು ತಮ್ಮ ಕಾರ್ಯ ಕ್ಷೇತ್ರದಲ್ಲಿ ವಿಶ್ವ ಪ್ರಸಿದ್ದಿಯನ್ನು ಪಡೆದಿದ್ದಾರೆ. ಮಹಿಳೆ ಕೀಳರಿಮೆ ಭಾವನೆಯನ್ನು ಬೆಳೆಸಿಕೊಳ್ಳದೆ ತನ್ನಲ್ಲಿರುವ ವಿಶೇಷತೆಗಳ ಬಗ್ಗೆ ಹೆಮ್ಮೆ ಪಡಬೇಕು, ತಾಯ್ತನ ಹೊಂದುವುದು, ಜನ್ಮ ನೀಡುವುದು ಮಹಿಳೆಯಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.


ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ SDPI ಮಂಗಳೂರು ವಿಧಾನಸಭಾ ಕ್ಷೇತ್ರ ಚುನಾವಣಾ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ, ಮಹಿಳೆಯರು ಸಂಘಟಿತರಾಗುವ ಮೂಲಕ ತಮಗಿರುವ ಸಂವಿಧಾನ ಬದ್ದ ಹಕ್ಕು, ಕರ್ತವ್ಯಗಳನ್ನು ತಿಳಿದುಕೊಂಡು ಅದರ ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕಿದೆ ಎಂದರು.
ಮಹಿಳೆಯರ ಅಭಿವೃದ್ಧಿ ಶಿಕ್ಷಣದಿಂದ ಸಾಧ್ಯ. ಆದ್ದರಿಂದ ಮಹಿಳೆಯರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ. ಮಹಿಳೆ ಇಂದು ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಮಹಿಳೆಯಿಲ್ಲದೆ ಪರಿಪೂರ್ಣ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣ ಕಷ್ಟಸಾಧ್ಯ ಎಂದು ತಿಳಿಸಿದರು

- Advertisement -


ಅದೇ ರೀತಿ ವುಮೆನ್ ಇಂಡಿಯಾ ಮೂವ್ಮೆಂಟ್’ನ ರಾಜ್ಯ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ, ಮಹಿಳಾ ರಾಜಕೀಯ ಭಾಗವಹಿಸುವಿಕೆಯು ಪ್ರಜಾಸತ್ತಾತ್ಮಕ ಆಡಳಿತಕ್ಕೆ ಸ್ಪಷ್ಟವಾದ ಲಾಭಗಳ ಬಗ್ಗೆ SDPI ಪಕ್ಷಕ್ಕೆ ಸೇರ್ಪಡೆಯಾದ ಮಹಿಳೆಯರಿಗೆ ಸ್ಫೂರ್ತಿ ತುಂಬುವ ಮಾತುಗಳನ್ನಾಡಿದರು,
ಈ ಸಂದರ್ಭದಲ್ಲಿ ಉಳ್ಳಾಲ ನಗರ ಸಭಾ ವ್ಯಾಪ್ತಿಯ ಹಲವು ಮಹಿಳೆಯರು SDPI ಪಕ್ಷಕ್ಕೆ ಸೇರ್ಪಡೆಗೊಂಡು ಪಕ್ಷದ ಸದಸ್ಯತ್ವ ವನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಉಳ್ಳಾಲ ನಗರ ಸಭಾ ಕೌನ್ಸಿಲರ್’ಗಳಾದ ಶಹನಾಝ್ ಅಕ್ರಮ್, ರುಕಿಯ, ಕಮರುನ್ನಿಸಾ, ಝರಿನಾ ರೌಪ್, ಮತ್ತು ನಗರ ಸಭೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು

Join Whatsapp