ದೆಹಲಿ ಸೇರಿ ಹಲವೆಡೆ ಭೂಕಂಪ: ನಿದ್ದೆ ಬಿಟ್ಟು ಮನೆಯ ಹೊರಗೆ ಕುಳಿತ ಜನರು

Prasthutha|

ನವದೆಹಲಿ: ರಾಷ್ಟ್ರ ರಾಜಧಾನಿ ಹಾಗೂ ದೆಹಲಿಗೆ ಹೊಂದಿಕೊಂಡಂತಿರುವ ಹಲವು ನಗರಗಳಲ್ಲಿ ರಾತ್ರಿ ಭೂಕಂಪನ ಸಂಭವಿಸಿದೆ. ಭೂಮಿ ಕಂಪಿಸಿದ ಅನುಭವವಾಗುತ್ತಲೇ ದೆಹಲಿ ಹಾಗೂ ಸುತ್ತಮುತ್ತಲಿನ ನಗರಗಳ ಜನರು ಆತಂಕದಿಂದ ಮನೆಯಿಂದ ಹೊರಗೆ ಓಡಿದ್ದಾರೆ‌. ಕೆಲವು ಮನೆಯಲ್ಲಿರುವ ಫ್ಯಾನ್‌ ಸೇರಿ ಹಲವು ವಸ್ತುಗಳು ಅಲುಗಾಡಿವೆ‌. ಕೆಲವೆಡೆ ದೀರ್ಘ ಹೊತ್ತು ಜನ ಮನೆಯೊಳಗೆ ಹೋಗಲು ಭಯಪಟ್ಟಿದ್ದಾರೆ‌‌. ಅದೃಷ್ಟವಶಾತ್ ಭೂಕಂಪದಿಂದ ಯಾವುದೇ ಆಸ್ತಿ ಪಾಸ್ತಿಗೆ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.

- Advertisement -

ನೇಪಾಲದಲ್ಲಿ ಭೂಕಂಪನದ ಬಳಿಕ ಅದು ಭಾರತದ ಕೆಲೆವೆಡೆಗೆ ವ್ಯಾಪಿಸಿದೆ ಎಂದು ಅಂದಾಜಿಸಲಾಗಿದೆ. ನೇಪಾಳದಲ್ಲಿ ನೇಪಾಳದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಒಂದು ತಿಂಗಳಲ್ಲಿ ಇದು ಮೂರನೇ ಬಾರಿ ಸಂಭವಿಸಿರುವ ಭೂಕಂಪವಾಗಿದೆ.

ಕಳೆದ ತಿಂಗಳಷ್ಟೇ ಅಫಘಾನಿಸ್ತಾನದ ಹೆರಾತ್‌ನಲ್ಲಿ ಸರಣಿ ಭೂಕಂಪ ಸಂಭವಿಸಿ 2 ಸಾವಿರಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ. ಹೆರಾತ್ ನಗರ ಮಾತ್ರವಲ್ಲದೇ, ಪಶ್ಚಿಮ ಅಫಘಾನಿಸ್ತಾನದ ಗ್ರಾಮೀಣ ಪ್ರದೇಶದಲ್ಲೂ ಭೂಕಂಪದ ತೀವ್ರತೆ ಹೆಚ್ಚಾಗಿದ್ದು, ಸಾಕಷ್ಟು ಸಾವು ನೋವು ಸಂಭವಿಸಿತ್ತು. ಇದೆಲ್ಲ ತಿಳಿದ ಜನರು ಭೂಕಂಪನ ಅನುಭವ ಆದಾಗ ಆತಂಕಿತರಾಗಿದ್ದಾರೆ.



Join Whatsapp