ಬಾಂಗ್ಲಾದೇಶದಲ್ಲಿ ಮತ್ತೆ ಮೂರು ವಿಪಕ್ಷ ಮುಖಂಡರ ಬಂಧನ

Prasthutha|

ಢಾಕಾ: ಬಾಂಗ್ಲಾ ದೇಶದಲ್ಲಿ ಪ್ರಧಾನಿ ಶೇಖ್ ಹಸೀನಾ ವಿರುದ್ಧ ವಿಪಕ್ಷಗಳು ಪ್ರತಿಭಟನೆ ತೀವ್ರಗೊಳಿಸಿದ್ದು, ದೇಶವು ಎಂದೂ ಕಾಣದ ರಾಜಕೀಯಕ್ಕೆ ಸಾಕ್ಷಿಯಾಗುತ್ತಿದೆ. ಪ್ರತಿಭಟನೆ ನಡೆಸುತ್ತಿರುವವರ ಜತೆ ಮಾತುಕತೆ ಸಾಧ್ಯವಿಲ್ಲ ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ. ಅದರ ಬೆನ್ನಿಗೇ ಪ್ರಮುಖ ವಿಪಕ್ಷದ ಮೂವರು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

- Advertisement -

2009ರಿಂದಲೂ ಪ್ರಧಾನಿಯಾಗಿರುವ ಶೇಖ್ ಹಸೀನಾ ಕೂಡಲೇ ರಾಜೀನಾಮೆ ನೀಡಿ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಬೇಕೆಂದು ಪ್ರಮುಖ ವಿರೋಧ ಪಕ್ಷವಾಗಿರುವ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ ಸೇರಿದಂತೆ ವಿಪಕ್ಷಗಳು ಆಗ್ರಹಿಸಿ ಭಾರೀ ಪ್ರತಿಭಟನೆ ನಡೆಸುತ್ತಿವೆ. ಈಗಾಗಲೇ ಮಾಜಿ ಸಚಿವ ಅಮೀರ್ ಖುಸ್ರು ಸೇರಿದಂತೆ ಬಿಎನ್‍ಪಿಯ ನೂರಾರು ಹಿರಿಯ ಸದಸ್ಯರನ್ನು ಸರಕಾರ ಬಂಧಿಸಿದೆ.

ಬಳಿಕವೂ ಪ್ರತಿಭಟನೆ ಮುಂದುವರೆಯುತ್ತಿದ್ದು ಪ್ರಧಾನಿ ವಿಪಕ್ಷಗಳ ನಸಯಕರನ್ನು ಮೃಗಕ್ಕೆ ಹೋಲಿಸಿ, ಮೃಗಗಳ ಜೊತೆ ಮಾತುಕತೆ ಸಾಧ್ಯವಿಲ್ಲ ಎಂದಿದ್ದಾರೆ‌‌. ಅದರ ಬಳಿಕ ಪಕ್ಷದ ವಕ್ತಾರ ಝಾಹಿರ್ ಸ್ವಪನ್, ಬಿಎನ್‍ಪಿ ಢಾಕಾ ಘಟಕದ ಅಧ್ಯಕ್ಷ ಅಮೀನುಲ್ ಹಕ್, ಉನ್ನತ ಮುಖಂಡ ಮಿರ್ಝಾ ಫಕ್ರುಲ್‍ರನ್ನು ಬಂಧಿಸಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

Join Whatsapp