ರಾಜಧಾನಿಯಲ್ಲಿ ಹಿಂದಿನಷ್ಟೇ ಮತದಾನ

Prasthutha|

ಬೆಂಗಳೂರು: ಚುನಾವಣಾ ಆಯೋಗ ಹಾಗೂ ಬಿಬಿಎಂಪಿ ಕೈಗೊಂಡಿದ್ದ ಮತ ಜಾಗೃತಿ ಹೊರತಾಗಿಯೂ ಶುಕ್ರವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜಧಾನಿಯಲ್ಲಿ ಹಿಂದಿನಷ್ಟೇ ಮತದಾನವಾಗಿದ್ದು, ನಗರ ನಿವಾಸಿಗಳು ಮತಗಟ್ಟೆಗಳಿಗೆ ಬರುವುದಿಲ್ಲ ಎಂಬ ಅಪವಾದ ಎಂದಿನಂತೆ ಮುಂದುವರಿದಿದೆ.

- Advertisement -

ಬೆಂಗಳೂರು ಉತ್ತರ, ದಕ್ಷಿಣ ಹಾಗೂ ಕೇಂದ್ರ ಲೋಕಸಭಾ ಕ್ಷೇತ್ರಗಳಲ್ಲಿ ಸರಾಸರಿ ಶೇ. 53.49ರಷ್ಟಾಗಿದೆ. ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಒಳಪಟ್ಟಿರುವ ಪಾಲಿಕೆಯ ಪ್ರದೇಶಗಳ ನಾಲ್ಕು ವಿಧಾನಸಭಾ ಕ್ಷೇತ್ರದ ಮತದಾನ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡರೆ, ಬಿಬಿಎಂಪಿಯ ಎಲ್ಲ 28 ವಿಧಾನಸಭಾ ಕ್ಷೇತ್ರಗಳಲ್ಲಿನ ಸರಾಸರಿ ಮತದಾನ ಶೇ.54. ಹಿಂದಿನ ಚುನಾವಣೆಯಲ್ಲೂ ಇಷ್ಟೇ ಪ್ರಮಾಣದ ಮತ ಚಲಾವಣೆಯಾಗಿತ್ತು.



Join Whatsapp